ಭಟ್ಕಳ:  ಪೋಷಕಾಂಶಯುಕ್ತವಾಗಿರುವ ರಾಗಿ  ಹೆಲ್ತ್ ಮಿಕ್ಸನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಿಸಬೇಕು. ಸಿರಿ ಧಾನ್ಯಗಳಲ್ಲಿ ಪ್ರಮುಖವಾಗಿರುವಂತಹ  ರಾಗಿ ಹೆಲ್ತ್ ಮಿಕ್ಸನ್ನು ಕುಡಿಯವುದರಿಂದ ಅಪೌಷ್ಟಿಕತೆ ನಿವಾರಣೆಯಾಗಿ ಉತ್ತಮ ಅರೋಗ್ಯ ಪಡೆಯುವಂತಾಗುತ್ತದೆ ಎಂದು   ತಹಸೀಲ್ದಾರ ತಿಪ್ಪೇಸ್ವಾಮಿ ಹೇಳಿದರು.

ವಿಡಿಯೋ ನೋಡಿ :  https://fb.watch/qnf4D5Nq_V/?mibextid=Nif5oz

ಅವರು ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಕಾರದ ಈ ಯೋಜನೆಯ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು. ಜೊತೆಗೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ತಮ್ಮ ಗುರಿಯತ್ತ ಸಾಗಿ ಎಂದು ಹೇಳಿದರು.

ಇದನ್ನೂ ಓದಿ : ಮರಕ್ಕೆ ಕಾರು ಡಿಕ್ಕಿ ಹೊಡೆದು 6 ಜನ ದುರ್ಮರಣ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಕೆ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೊನ್ನಪ್ಪ ನಾಯ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತಾಲೂಕು ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ವಿ.ಡಿ. ಮೊಗೇರ ಮಾತನಾಡಿ, ಕರಾವಳಿ ಭಾಗದವರಿಗೆ ರಾಗಿಯ ಆಹಾರ ಪದ್ದತಿ ಹೊಸದೇನಲ್ಲ. ಹೇರಳ ಪೌಷ್ಟಿಕಾಂಶ ಹೊಂದಿರುವ ರಾಗಿಯಿಂದ ತಯಾರಿಸಲಾದ ಮಾಲ್ಟ್ ಆರೋಗ್ಯಕ್ಕೆ ಉತ್ತಮ. ವಿದ್ಯಾರ್ಥಿಗಳು ಇದರ ಪೂರ್ಣ ಪ್ರಯೋಜನ ಪಡೆದು ಕೊಳ್ಳುವಂತೆ ಕರೆ ನೀಡಿದರು. ತನ್ಮೂಲಕ ವಿದ್ಯಾರ್ಥಿಗಳು ಕಲಿಕೆಯಲ್ಲಿಯೂ ಉತ್ತಮ ಪ್ರಗತಿ ಸಾಧಿಸಲು ಪ್ರಯತ್ನಿಸಿ ಎಂದು ಹೇಳಿದರು.


ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಭಾಕರ ಚಿಕ್ಕನಮನೆ ಪ್ರಾಸ್ತಾವಿಕ ಮಾತನಾಡಿ,  ವಿದ್ಯಾರ್ಥಿಗಳು   ಪೌಷ್ಟಿಕಾಂಶದ ಕೊರತೆಯಿಂದ ಬಳಲಬಾರದು ಎನ್ನುವ  ಉದ್ದೇಶದಿಂದ ಸರಕಾರ ಈಗಾಗಲೇ ಹಾಲು, ಮೊಟ್ಟೆ ನೀಡುತ್ತಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಬೆಳಕೆ ಗ್ರಾಮ ಪಂಚಾಯತ ಸದಸ್ಯ ಮಂಜಯ್ಯ ಮೊಗೇರ, ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶಿಕ್ಷಣ ಸಂಯೋಜಕಿ ಗೀತಾ ನಾಯ್ಕ, ಬೆಳಕೆ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ತೇಜಕುಮಾರ ಜೈನ, ಮೀನಾಕ್ಷಿ ನಾಯ್ಕ ಇದ್ದರು.


ನಿಧಿ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಶಾಲಿನಿ ನಾಯ್ಕ ಸ್ವಾಗತಿಸಿದರು. ಪ್ರಕಾಶ ಶಿರಾಲಿ ವಂದಿಸಿದರು. ಮಹೇಶ್ವರ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸಲಾಯಿತು.