ಬೆಳ್ತಂಗಡಿ: ಉತ್ತರ ಕನ್ಮಡ ಜಿಲ್ಲೆಯ ಶಿರಸಿ ಮೂಲದ ಅರ್ಚಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಮ್ಮ ಕೊಠಡಿಯ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬೆಳ್ತಂಗಡಿ ತಾಲೂಕಿನ ಸವಣಾಲು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ವಿಜಯ ಭಟ್ಟ(29) ಸಾವಿಗೆ ಶರಣಾದವರು.
ಶಿರಸಿ ಮೂಲದ ಇವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಮೂರು ತಿಂಗಳ ಮಗು ಕೂಡ ಇದೆ. ದೇವಸ್ಥಾನದ ಹಿಂಬದಿಯ ಕೊಠಡಿಯಲ್ಲಿ ಒಬ್ಬರೇ ವಾಸವಾಗಿದ್ದರು. ಇಂದು (ಮೇ ೪) ಪೂಜೆಗೆ ಬಂದಿಲ್ಲ ಎಂದು ಕರೆಯಲು ಕೊಠಡಿಗೆ ಹೋದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ‘ಕೈ’ ಹಿಡಿದ ಇನಾಯತುಲ್ಲಾ ಶಾಬಂದ್ರಿ; ಲಾಭ – ನಷ್ಟದ ಲೆಕ್ಕಾಚಾರ