ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ ಶ್ರೀಧರ ಭಟ್ಟ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಮರುಮೌಲ್ಯಮಾಲನದಲ್ಲಿ ರಾಜ್ಯಕ್ಕೆ ೫ನೇ ರ್ಯಾಂಕ್ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ.
ಇದನ್ನೂ ಓದಿ : ಹೊನ್ನಾವರದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ
ಪರೀಕ್ಷಾ ಫಲಿತಾಂಶ ಪ್ರಕಟವಾದಾಗ ರಾಜ್ಯಕ್ಕೆ ಏಳನೇ ರ್ಯಾಂಕ್ ಪಡೆದುಕೊಂಡಿದ್ದ ಈಕೆಗೆ ಇಂಗ್ಲೀಷ್ ವಿಷಯದಲ್ಲಿ ನೀಡಿದ ಅಂಕದ ಕುರಿತು ಅನುಮಾನಗೊಂಡು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು.
ಇದನ್ನೂ ಓದಿ : ಚಿರತೆ ದಾಳಿ ; ಓರ್ವ ಆಸ್ಪತ್ರೆಗೆ ದಾಖಲು
ಮರುಮೌಲ್ಯಮಾಪನದ ಅಂಕ ಪ್ರಕಟವಾಗಿದ್ದು, ಇಂಗ್ಲೀಷ್ ಭಾಷಾ ವಿಷಯದಲ್ಲಿ ೨ ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುವುದರ ಮೂಲಕ ಶ್ರಾವ್ಯ, ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ೫ನೇ ರ್ಯಾಂಕ್ ಪಡೆದು ತನ್ನ ಸಾಧನೆಯನ್ನು ಹೆಚ್ಚಿಸಿಕೊಂಡಿದ್ದಾಳೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶ್ರಾವ್ಯ ಭಟ್ಟ ಭೌತಶಾಸ್ತ್ರದಲ್ಲಿ ೯೭, ರಸಾಯನ ಶಾಸ್ತ್ರ ೧೦೦, ಗಣಿತ ೧೦೦, ಜೀವಶಾಸ್ತ್ರ ೧೦೦, ಇಂಗ್ಲೀಷ್ ೯೭ (೯೫+೨), ಸಂಸ್ಕೃತ ೧೦೦ ಅಂಕಗಳೊಂದಿಗೆ ಒಟ್ಟೂ ೬೦೦ ಅಂಕಗಳಲ್ಲಿ ೫೯೪ ಅಂಕ ಗಳಿಸಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದಾಳೆ.
ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ನನಗೆ ಸಿಕ್ಕ ಅಂಕದಿಂದ ಬೇಜಾರಾಗಿತ್ತು. ಆದರೆ ಮರುಮೌಲ್ಯಮಾಪದಿಂದ ದೊರೆತ ಅಂಕ ಈ ಬೇಜಾರನ್ನು ಹೊಗಲಾಡಿಸಿದೆ.
– ಶ್ರಾವ್ಯ ಭಟ್ಟ, ಸಾಧಕ ವಿದ್ಯಾರ್ಥಿನಿ