ಭಟ್ಕಳ : ಇಲ್ಲಿನ ಹನುಮಾನ ನಗರದ ಶ್ರೀನಿವಾಸ ನಾಯ್ಕಗೆ ಗಡಿಪಾರು ನೋಟಿಸ್ ಜಾರಿ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಭಟ್ಕಳ ಮಂಡಲ ಸೇರಿದಂತೆ ಜಿಲ್ಲಾ, ರಾಜ್ಯ ಮಟ್ಟದ ಬಿಜೆಪಿ ಮುಖಂಡರು ಖಂಡಿಸಿರುವ ಬೆನ್ನಲ್ಲೇ ರಾಜಕೀಯೇತರ ಸಂಘಟನೆಗಳೂ ಶ್ರೀನಿವಾಸ ನಾಯ್ಕಗೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿವೆ.
ಇದನ್ನೂ ಓದಿ : ಅಮಿತ್ ಶಾ ಭೇಟಿಗೆ ಈಶ್ವರಪ್ಪ ದೆಹಲಿಗೆ : ಬಿ ವೈ ರಾಘವೇಂದ್ರ ಒತ್ತಡ ಶಂಕೆ
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಭಟ್ಕಳದ ಶ್ರೀ ಭುವನೇಶ್ವರಿ ಕನ್ನಡ ಸಂಘ, ಕನ್ನಡಪರ ನಿಷ್ಠಾವಂತ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶದ ಪ್ರಕರಣ ದಾಖಲಿಸಿರುವುದು ಖೇದಕರ ಎಂದು ಹೇಳಿದೆ. ನಮ್ಮ ಕನ್ನಡ ಸಂಘಟನೆಯ ಹೋರಾಟಗಳಲ್ಲಿ ಶ್ರೀನಿವಾಸ ನಾಯ್ಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕನ್ನಡ ಪರ ಕೆಲಸಗಳಲ್ಲಿ ಯಾವತ್ತೂ ನಮ್ಮೊಂದಿಗಿರುವ ಅವರ ವಿರುದ್ಧ ಅಧಿಕಾರಿಗಳ ಕ್ರಮವನ್ನು ಬಲವಾಗಿ ಖಂಡಿಸುತ್ತಿದ್ದೇವೆ. ಕೂಡಲೇ ಇವರ ಮೇಲಿನ ಗಡಿಪಾರು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶ್ರೀ ಭುವನೇಶ್ವರಿ ಕನ್ನಡ ಸಂಘ ಕಳೆದ ಇಪ್ಪತಾರು ವರ್ಷಗಳಿಂದ ಭಟ್ಕಳದಲ್ಲಿ ಕನ್ನಡಪರ ಹೋರಾಟಗಳನ್ನು ಮಾಡಿಕೊಂಡು ಬಂದಿದೆ. ಕನ್ನಡಪರ ಕಾರ್ಯಕರ್ತರ ಪರ ಸದಾ ಇರಲಿದೆ. ಶ್ರೀನಿವಾಸ ನಾಯ್ಕಗೆ ಎಲ್ಲಾ ರೀತಿಯ ನೈತಿಕ ಬೆಂಬಲ ನೀಡುತ್ತೇವೆ. ಇವರ ಪರ ಹೋರಾಟ ಅನಿವಾರ್ಯವಾದಲ್ಲಿ ಅದಕ್ಕೂ ಹಿಂಜರಿಯುವುದಿಲ್ಲ.
– ಅಣ್ಣಪ್ಪ ನಾಯ್ಕ ಆಸರಕೇರಿ, ಅಧ್ಯಕ್ಷ, ಶ್ರೀ ಭುವನೇಶ್ವರಿ ಕನ್ನಡ ಸಂಘ, ಭಟ್ಕಳ.