ಭಟ್ಕಳ : ತಾಲೂಕಿನ ಮಾವಿನಕುರ್ವೆ ಬಂದರದಲ್ಲಿರುವ ಶ್ರೀ ನಾಗಬನ ದೇವಸ್ಥಾನದ ೧೩ನೇ ವರ್ಷದ ವರ್ಧಂತಿ ಮಹೋತ್ಸವ ಏ.೪ರಂದು ಗುರುವಾರ ಜರುಗಲಿದೆ.

ಇದನ್ನೂ ಓದಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದವರಾ? ಈ ವರದಿ ಓದಿ…

ನಾಗಬನ ಕ್ಷೇತ್ರದಲ್ಲಿ ಬೆಳಿಗ್ಗೆ ೯.೩೦ಕ್ಕೆ ಗಣಪತಿ ಪೂಜೆ, ಪೂಣ್ಯಾಹ, ಪೂಜಾ ಹೋಮಾದಿ, ಕಲಾವೃದ್ಧಿ ಹೋಮ ಜರುಗಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ೧ರಿಂದ ೩ರವರೆಗೆ ಮಹಾಅನ್ನಸಂತರ್ಪಣೆ ಜರುಗುವುದು. ಸಂಜೆ ೬ ಗಂಟೆಗೆ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ನಾಗಬನ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.