ಭಟ್ಕಳ :ತಾಲೂಕಿನ ಶಿರಾಲಿ ಅಳ್ವೆಕೋಡಿ-ಸಣಬಾವಿಯ ಶ್ರೀ ವಿಶ್ವಶಕ್ತಿ ದೇವಸ್ಥಾನ ಆರ್ಕಟಿಮನೆ ಶಾಂತಿನಿವಾಸ ಕುಟುಂಬದವರು ಆಯೋಜಿಸಿದ್ದ ಷೋಡಶ ಪವಿತ್ರ ನಾಗಮಂಡಲೋತ್ಸವ ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ನಾಗಮಂಡಲೋತ್ಸವದ ವಿಶೇಷ ವಿಡಿಯೋ ವರದಿ ನೋಡಿ :  https://fb.watch/qYU9gl0FGX/?mibextid=Nif5oz

ಶ್ರೀ ದೇವಿದಾಸ ಸ್ವಾಮಿಗಳು ಮತ್ತು ಕುಟುಂಬಿಕರು ಹಾಗೂ ಬಂಧು-ಮಿತ್ರರು ಆರಾಧಿಸಿ ಪೂಜಿಸಿಕೊಂಡು ಬರುತ್ತಿರುವ ಶ್ರೀ ದೇವರ ಬನದಲ್ಲಿ ಮಾರ್ಚ್ ೧೫ ರಿಂದ ಆರಂಭವಾದ ಈ ಕಾರ್ಯಕ್ರಮವು ಮಾರ್ಚ್ ೨೧ರ ಗುರುವಾರ ರಾತ್ರಿ ನಡೆದ ನಾಗಮಂಡಲೋತ್ಸವ ಕಾರ್ಯಕ್ರಮದ ಮುಖೇನ ಮುಕ್ತಾಯಗೊಂಡಿತು.

ಈ ವರದಿ ನೋಡಿ : ಲೋಕಸಭೆ ಚುನಾವಣೆ : ರಾಜ್ಯದ 17 ಕ್ಷೇತ್ರಗಳಿಗೆ ಕೈ ಅಭ್ಯರ್ಥಿ ಘೋಷಣೆ

ನಾಗಪಾತ್ರಿಗಳಾಗಿ ಗೋಳಿಅಂಗಡಿಯ ವಾಸುದೇವ ವೈದ್ಯ ಮತ್ತು ಬಳಗ ಹಾಗೂ ಮದ್ದೂರಿನ ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗ, ಅಲ್ಲದೇ ನಾಗ ಕನ್ನಿಕೆಯರಾಗಿ ಬಾಲಚಂದ್ರ ವೈದ್ಯ, ಹರಿಶ್ಚಂದ್ರ ವೈದ್ಯ, ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಬಳಗದವರು ನಾಗಮಂಡಲೋತ್ಸವ ನಡೆಸಿಕೊಟ್ಟರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದಿರುವ ಷೋಡಸ ಪವಿತ್ರ ನಾಗಮಂಡಲೋತ್ಸವಕ್ಕೆ ಪಕ್ಕದ ಉಡುಪಿ ಜಿಲ್ಲೆಯಿಂದ ಸೇರಿ ತಾಲೂಕಿನ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ 3 ಗಂಟೆಯಿಂದಲೇ ಷೋಡಶ ಪವಿತ್ರ ನಾಗಮಂಡಲೋತ್ಸವ ನೋಡಲು ಭಕ್ತರು ಆಗಮಿಸಿದ್ದ ವಿಶೇಷವಾಗಿತ್ತು. ರಾತ್ರಿಯಿಂದ ಬೆಳಗಿನ ಜಾವ ತನಕ ನಡೆದ ಪವಿತ್ರ ಷೋಡಸ ನಾಗಮಂಡಲೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.