ಭಟ್ಕಳ : ಸಚಿವರ ಬಾಲ ಬಂಟರು ಅರಣ್ಯ ಜಾಗ, ಕಂದಾಯ ಜಾಗ ಒತ್ತುವರಿ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಡುವವರಿಗೆ ಸಚಿವರು ಪ್ರೋತ್ಸಾಹ ನೀಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಸಚಿವರ ಬಂಟರಿಗೆ ಹಾಗೂ ಅವರ ಹಿಂಬಾಲಕರಿಗೆ ಯಾವುದೇ ಪ್ರಕರಣವನ್ನು ದಾಖಲಿಸುತ್ತಿಲ್ಲ ಎಂದು ಸಚಿವ ಮಂಕಾಳ ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಶುಕ್ರವಾರದಂದು ಇಲ್ಲಿನ ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ೧ ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ೪೦೦ಕ್ಕೂ ಅಧಿಕ ಕೊಲೆ ಪ್ರಕರಣ ನಡೆದಿದೆ. ಅದೇ ರೀತಿ, ಹಾಡು ಹಗಲೇ ದರೋಡೆ ಗ್ಯಾಂಗ್ ವಾರ ನಡೆಯುತ್ತಿದೆ. ಸರಕಾರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅದೇ ರೀತಿ ನಮ್ಮ ತಾಲೂಕಿನಲ್ಲಿ ನಾನು ಶಾಸಕನಿದ್ದ ವೇಳೆ ೪ ಚೆಕ್ ಪೋಸ್ಟ್ ಗಳಿದ್ದವು. ಈಗ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸಚಿವ ಮಂಕಾಳ ವೈದ್ಯ ಅವರ ಅವಧಿಯಿಂದ ಚೆಕ್ ಪೋಸ್ಟ್ ಬಂದ್ ಮಾಡಲಾಗಿದೆ. ಆದರೆ ಇಲಾಖೆಯು ಚೆಕ್ ಪೋಸ್ಟನ್ನು ಸಚಿವರ ಆದೇಶ ಮೇರೆಗೆ ತೆರವು ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ
ನಾನು ಶಾಸಕನಾಗಿದ್ದ ಅವಧಿಯಲ್ಲಿ ಹಳೆ ಅತಿಕ್ರಮಣದಾರರಿಗೆ ಸಹಕರಿಸಿ ಅವರು ಬದುಕಲು ಅವಕಾಶ ಮಾಡಿಕೊಟ್ಟಿದ್ದೇನೆ. ಹಳೆಯ ಮನೆಗೆ ರಿಪೇರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಕುಡಿಯುವ ನೀರಿಗೆ ಬೋರ್ ಹೊಡೆಯಲು ಅವಕಾಶ ಮಾಡಿಕೊಟ್ಟಿದ್ದೇನೆ. ಆದರೆ ನಾನು ಹೊಸ ಅತಿಕ್ರಮಣಕ್ಕೆ ಎಂದೂ ಪ್ರೋತ್ಸಾಹ ನೀಡಿಲ್ಲ. ಆದರೆ ಸಚಿವರು ತಮ್ಮವರಿಗೆ ಅತಿಕ್ರಮಣ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಯಾವುದೇ ಪ್ರತಿರೋಧ ಒಡ್ಡುತ್ತಿಲ್ಲ. ಢೋಂಗಿ ರಿಯಲ್ ಎಸ್ಟೇಟ್ ನವರಿಗೆ ೫ ವರ್ಷದ ಅವಧಿಯಲ್ಲಿ ನಾನು ಎಲ್ಲೂ ಸಹಕರಿಸಿಲ್ಲ ಎಂದರು.
ಇದನ್ನೂ ಓದಿ : ಹಿಂಸಾತ್ಮಕವಾಗಿ ಕೋಣ ಸಾಗಾಟ ಯತ್ನ ; ಇಬ್ಬರ ಬಂಧನ, ಓರ್ವ ಪರಾರಿ
24 ಗಂಟೆಯಲ್ಲಿ ಜಾಗ ತೆಗೆದುಕೊಂಡು ಇಲಾಖೆಯವರು ತೆರಳಿ ಜಿಪಿಎಸ್ ಮಾಡಿಕೊಡುವ ಹಂತಕ್ಕೆ ಭಟ್ಕಳದ ಕಾಯ್ಕಿಣಿಯಲ್ಲಿ ಆಗಿದೆ. ಇದರಿಂದ ಸಚಿವರು ಅಧಿಕಾರವನ್ನು ಎಷ್ಟು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ಬಡವರಿಗೆ ಒಂದು ಕಾನೂನಾದರೆ ಸಚಿವರಿಗೆ ಒಂದು ಕಾನೂನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಪರೀಕ್ಷೆ ಮುಗಿದ ಬೆನ್ನಲ್ಲೇ ಫಲಿತಾಂಶ ಪ್ರಕಟ : ಹೊಸ ದಾಖಲೆ ಬರೆದ ವಿಟಿಯು
ಬೀನಾ ವೈದ್ಯ ಹಿಂದುಗಡೆ ಎಕರೆ ಗಟ್ಟಲೆ ಜಾಗವನ್ನು ಮಣ್ಣು ಸಾಗಾಟ ಮಾಡುತ್ತಿದ್ದಾರೆ. ೧೫ ದಿವಸ ಕಾಲಾವಕಾಶ ನೀಡಿದ್ದೇವೆ. ಅಲ್ಲಿಯವರೆಗೆ ಅರಣ್ಯ ಇಲಾಖೆ ಪುನಃ ಜಾಗವನ್ನು ವಶಪಡಿಸಿಕೊಂಡು ತಂತಿ ಬೇಲಿಯನ್ನು ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಇಲಾಖೆಯ ಮುಂದುಗಡೆ ಮಾಡಲಿದ್ದೇವೆ ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ : ವಿಶ್ವದರ್ಶನ ಕೇಂದ್ರೀಯ ಶಾಲೆಯ ಶಿಕ್ಷಕರಿಗೆ ತರಬೇತಿ ಕಾರ್ಯಗಾರ
ಸಚಿವರು ಸರಕಾರದ ಆದೇಶ ವಿರೋಧಿಸಿದ್ದಾರೆ.
೧೫ ದಿನಗಳಲ್ಲಿ ಫೆನ್ಸಿಂಗ್ ಮಾಡಬೇಕೆಂದು ಇಲಾಖೆಗೆ ಒತ್ತಾಯ ಮಾಡಿ ಕೆಲಸ ಮಾಡಿಸಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬೋರ ವೆಲ್ ತೆಗೆದರೆ, ಶೀಟ್ ಬದಲಾಯಿಸಿದರೆ, ಮನೆಗೆ ಕಂಪೌಂಡ ಕಟ್ಟಿದರೆ ತೆರವು ಮಾಡಿಸುತ್ತಾರೆ. ಅಡಿಕೆ ಮರ ಕತ್ತರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವರ ಒತ್ತುವರಿಯನ್ನು ಕಾನೂನು ಕ್ರಮ ತೆಗೆದುಕೊಂಡು ಜಾಗ ವಶಕ್ಕೆ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ ,ಸುರೇಶ ನಾಯ್ಕ ಕೋಣೆಮನೆ, ಮೋಹನ ಮುಂತಾದವರು ಉಪಸ್ಥಿತರಿದ್ದರು.