ಚಾಮರಾಜನಗರ: ನಿನ್ನೆಯಿಂದ ಆರಂಭವಾಗಿರುವ ಪಿಯುಸಿ ಪರೀಕ್ಷೆಯಲ್ಲಿ ಸತತ ನಾಲ್ಕನೇ ಬಾರಿ ಕನ್ನಡ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಶುಭ ಕೋರಿ ಆತನ ಗೆಳೆಯರು ಊರಲ್ಲಿ ಅಳವಡಿಸಿದ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ : ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು : ೫ರಂದು ನಡ್ಡಾ ಬೆಳಗಾವಿಗೆ

ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ ಕನ್ನಡ ಪರೀಕ್ಷೆ ಬರೆಯಲು ಹೊರಟವನ ಕಾಲೆಳೆಯುವ ರೀತಿಯಲ್ಲಿ ಶುಭಾಶಯ ಕೋರುವ ಪ್ಲೆಕ್ಸ್ ಚಾಮರಾಜ ನಗರದಲ್ಲಿ ಶುಕ್ರವಾರ ಕಂಡು ಬಂದಿತ್ತು.

ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಈ ಪ್ಲೆಕ್ಸ್ ಅಳವಡಿಸಲಾಗಿತ್ತು. ಸತತ ನಾಲ್ಕನೇ ಬಾರಿ ಕನ್ನಡ ಪರೀಕ್ಷೆ ಬರೆಯುತ್ತಿರುವ ಶ್ರೀಯುತ ಜೀವನ ರವರಿಗೆ ಶುಭಾಶಯಗಳು ಎಂದು ಪ್ಲೆಕ್ಸ್‌ನಲ್ಲಿ ಬರೆಯಲಾಗಿದೆ. ಸ್ನೇಹಿತನ ಫೋಟೊ ಹಾಕಿ, ಇತ್ತೀಚೆಗೆ ಟ್ರೆಂಡ್ ಆಗಿರುವ ಬೆಳ್ಳುಳ್ಳಿ ಕಬಾಬ್ ಎಂಬ ಶೀರ್ಷಿಕೆ ನೀಡಲಾಗಿದೆ. ನಮ್ ಮನ್ಸು ನಮ್ಗೆ ಒಳ್ಳೆದ್ ಮಾಡಿದ್ರೆ, ದೇವ್ರು ಈ ಎಕ್ಸಾಮ್ ಎಲ್ಲಾ ಏನಿಕ್ಕೆ ಎಂಬ ಒಕ್ಕಣೆಯೂ ಪ್ಲೆಕ್ಸ್‌ನಲ್ಲಿದೆ.

ಈ ವಿಡಿಯೋ ನೋಡಿ : ಚಿರತೆ ಸೆರೆ, ಜನತೆ ನಿಟ್ಟುಸಿರು  https://fb.watch/qyx5NewJwf/?mibextid=Nif5oz