ಬೆಳಗಾವಿ : ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಬೆನ್ನಲ್ಲೇ ನಗರದ ಬಟ್ಟೆ ಮಳಿಗೆಯ ಸತ್ತ ಗುರು ಎಂಬ ಫಲಕವನ್ನು ಕೊನೆಗೂ ಬದಲಾಯಿಸಲಾಗಿದೆ.

ಇದನ್ನೂ ಓದಿ : ಕೃಷಿ ಹೊಂಡದಲ್ಲಿ ಬಿದ್ದು ಯುವಕರಿಬ್ಬರು ದುರ್ಮರಣ

ಸತ್ ಗುರು ಎಂಬ ಅಂಗಡಿ ಮಾಲೀಕರು ಅಂಗಡಿಯ ಹೆಸರನ್ನು ಗೂಗಲ್ ನಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ ಭಾಷಾಂತರ ಮಾಡಿ ಅದರಲ್ಲಿ ತೋರಿಸಲಾದ ಅಕ್ಷರಗಳನ್ನೇ ಬೋರ್ಡಿನಲ್ಲಿ ಮುದ್ರಿಸಿ, ಅಂಗಡಿ ಮುಂದೆ ಅಳವಡಿಸಿದ್ದರು. ಇದು ಒಂದೆಡೆ ಕನ್ನಡ ಅಕ್ಷರಗಳ ಕಗ್ಗೊಲೆ ಆಗಿದ್ದರೆ, ಇನ್ನೊಂದೆಡೆ ಕೆಟ್ಟ ಅರ್ಥ ಬರುವ ಪದಗಳ ಬಳಕೆ ಆಗಿತ್ತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬೆಳಗಾವಿಯ ಈ ಅಂಗಡಿಯ ಫಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊನೆಗೂ ಇದೀಗ ಅಂಗಡಿ ಮಾಲೀಕ ಸತ್ತ ಗುರು ಎಂದು ಅಳವಡಿಕೆ ಮಾಡಿದ್ದ ಫಲಕವನ್ನು ತೆರವುಗೊಳಿಸಿ ಸತ್ ಗುರು ಎಂದು ಬರೆಸಿ ಹೊಸಫಲಕ ಅಳವಡಿಸಿದ್ದಾರೆ. ಆದರೆ ಕನ್ನಡದಲ್ಲಿ ಇದನ್ನು ಸದ್ಗುರು ಎಂದು ಬರೆಸಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.