ಹೊನ್ನಾವರ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ೧೨ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಕಾರ್ಯಾಚರಣೆಯಲ್ಲಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಎಮ್.ಎಸ್ ರವರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣಾ ಪೂರ್ವ ಸಭೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ, ಸಿಬ್ಬಂದಿ ವಿನೋದ ನಾಯಕ, ಸಂತೋಷ ನಾಯ್ಕ ಹಾಗೂ ಕಾರು ಚಾಲಕ ಸಂಜಯ ನಾಯ್ಕ ಕರ್ತವ್ಯದ ನಿಮಿತ್ತ ಮೂಡ್ಕಣಿ ಗ್ರಾಮಕ್ಕೆ ತೆರಳಿದ್ದರು. ಅನಧಿಕೃತ ಮರಳು ದಾಸ್ತಾನು ಜತೆಗೆ ಸಾಗಾಣಿಕೆ ಬಗ್ಗೆ ಹಲವಾರು ದೂರುಗಳು ಬಂದಿತ್ತು. ಈ ಹಿನ್ನೆಲೆ ಅನಧಿಕೃತ ಮರಳು ಪ್ರದೇಶದ ಹೊನ್ನಾವರ ತಾಲೂಕಿನ ಕೆಳಗಿನ ಮೂಡ್ಕಣಿ ಪ್ರದೇಶಕ್ಕೆ ಬುಧವಾರ ಬೆಳಿಗ್ಗೆ ೭.೧೦ ರ ಸಮಯಕ್ಕೆ ಭೇಟಿ ನೀಡಿದ್ದರು. ಆ ಸ್ಥಳದಲ್ಲಿ ಅಕ್ರಮವಾಗಿ ಒಂದು ಲೋಡ್ ಮರಳು ದಾಸ್ತಾನು ಇತ್ತು. ಅಲ್ಲದೇ ಆಗ ತಾನೆ ಹಲವು ಗಾಡಿಗಳು ಮರಳನ್ನು ತುಂಬಿಕೊಂಡು ಹೋಗಿರುವ ಗುರುತುಗಳು ಅಧಿಕಾರಿಗಳಿಗೆ ಕಂಡು ಬಂದಿದೆ. ಸ್ಥಳದಲ್ಲಿ ಗಾಡಿಗೆ ಲೋಡ್ ಮಾಡುವ ಮೊದಲು ಬಳಸುವ ಕಬ್ಬಿಣದ ಒಟ್ಟೂ ೭ ಸ್ಟೆಪ್ ವಶಪಡಿಸಿಕೊಂಡಿದ್ದಾರೆ. ಅಲ್ಲಿಂದ ಬರುವಾಗ ಕೆಲವರು ಅಧಿಕಾರಿ ಆಶಾರವರ ಗಾಡಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ೯.೫೫ರ ವೇಳೆಗೆ ಆರೋಳ್ಳಿಯಲ್ಲಿ ಮೊಳೆಗಳನ್ನು ಹಾಕಿ ಗಾಡಿಯನ್ನು ಪಂಚರ್ ಮಾಡಿದ್ದಾರೆ. ನಂತರ ಆರೋಳ್ಳಿ ಗ್ಯಾರೇಜ್ ಹತ್ತಿರ ರಿಪೇರಿ ಮಾಡಿಸುವ ಸಮಯದಲ್ಲಿ ಅಡ್ಡಗಟ್ಟಿದ್ದರು ಎಂದು ದೂರಿನಲ್ಲಿ ಆಶಾ ತಿಳಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಆರೋಪಿತರು ಯಾರು?

ಆರೋಪಿತರು ಹೊನ್ನಾವರ ತಾಲೂಕಿನ ಜಗದೀಶ ನಾಯ್ಕ ತುಂಬೊಳ್ಳಿ, ಮಂಜು ಶೆಟ್ಟಿ, ಮುರಳೀಧರ ಶೆಟ್ಟಿ, ನವೀನ ನಾಯ್ಕ, ಮಹೇಶ ನಾಯ್ಕ, ನಾಗರಾಜ ಮೇಸ್ತ, ಜಾಕಿ ಅಲ್ಮೇಡಾ, ಸುಬ್ರಹ್ಮಣ್ಯ ನಾಯ್ಕ, ಪ್ರದೀಪ ನಾಯ್ಕ, ಶೇಖರ ಗೌಡ ಮತ್ತು ಪತ್ರಕರ್ತ ವಿಶ್ವನಾಥ‌ ನಾಯ್ಕ ಎಂದು ಗುರುತಿಸಲಾಗಿದೆ.

ಆರೋಪಿತರು ತಮಗೆ ಲಂಚಕೋರಿ, ಮುಂತಾದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಕೈ ತೋರಿಸಿದರು. ಮತ್ತೊಮ್ಮೆ ಬಂದರೆ ಲಾರಿ ಹತ್ತಿಸಿ ಸಾಯಿಸುತ್ತೇವೆ ಎಂದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೆರಂಗಡಿ ಗ್ರಾಮ ಪಂಚಾಯತ್ ಮುಂಭಾಗ ಉಮೇಶ ಪುರಸಯ್ಯ ನಂಜೂರುರವರ ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ದಾಸ್ತಾನು ಸಾಗಾಣಿಕೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ಬಾಡಿಗೆ ಮರಳನ್ನು ತುಂಬುವ ಕಬ್ಬಿಣದ ಒಟ್ಟೂ ೫ ಮೆಟ್ಟಿಲುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತರ ವಶಕ್ಕೆ ಪಡೆದಿದ್ದಾರೆ. ಅವರನ್ನು ಹೊನ್ನಾವರ ಜೆಎಮ್ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಜಾಮೀನಿನ‌ ಮೇಲೆ ಬಿಡುಗಡೆಗೊಳಿಸಲಾಗಿದೆ.