ಸಾಗರ: ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಸಹಾಯಧನ ನೀಡುವ ಜೊತೆಗೆ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕಾ ನಿಗಮದ ಅಧ್ಯಕ್ಷ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಧೈರ್ಯ ತುಂಬುವ ಕೆಲಸ ಮಾಡಿದರು.
ವಿಡಿಯೋ ನೋಡಿ : ನಾನೇ ಬೇರೆ…. ನನ್ ಸ್ಟೈಲೇ ಬೇರೆ…. https://fb.watch/qoEWKpxmNc/?mibextid=Nif5oz
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಕ್ಕಿ ಗ್ರಾಮದ ಪ್ರೇಮಚಂದ್ರ ಎಂಬ ವ್ಯಕ್ತಿ ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದರು. ಬಲ ಕಾಲು ಮುರಿತಕ್ಕೆ ಒಳಗಾಗಿ ಪ್ರೇಮಚಂದ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಬಡ ಕುಟುಂಬದ ಪ್ರೇಮಚಂದ್ರ ಮತ್ತು ಕುಟುಂಬ ಮುಂದಿನ ಚಿಕಿತ್ಸೆಗಾಗಿ ಸಾಗರ ಶಾಸಕರ ಬಳಿ ಸಹಾಯ ಕೇಳಲು ಶುಕ್ರವಾರ ಸಾಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಪ್ರೇಮಚಂದ್ರರಿಗೆ ಸಹಾಯಧನ ನೀಡಿದ ಶಾಸಕ ಬೇಳೂರು, ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಮುಂದಿನ ಚಿಕಿತ್ಸೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ : ಬೆಳಗಾವಿ : ಕಾರುಗಳ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಮೂವರ ಸಾವು