ಹೊನ್ನಾವರ : ಇಲ್ಲಿನ ಪ್ರಭಾತ ನಗರದ ನಿವಾಸಿ ಸಾನ್ವಿ ರಾವ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ೬೦೦ ಕ್ಕೆ ೫೯೫ ಅಂಕ ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ. ಇಂಗ್ಲೀಷಿನಲ್ಲಿ ೯೫ ಅಂಕ ಪಡೆದರೆ, ಉಳಿದ ಎಲ್ಲಾ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ.
ಇದನ್ನೂ ಓದಿ : ಕಾಲೇಜಿಗೆ ಹೋಗದೇ ದ್ವಿತೀಯ ಪಿಯುಸಿಯಲ್ಲಿ 95.70% ಸಾಧನೆ
ಇವರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಹೊನ್ನಾವರದ ಜಗದೀಶ ರಾವ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹೊನ್ನಾವರದ ತರಬೇತಿ ಅಧಿಕಾರಿ ವಿನುತಾ ಭಟ್ ದಂಪತಿಯ ಪುತ್ರಿ. ಇವರ ಅಣ್ಣ ಸಮರ್ಥ ರಾವ್ ವಿಶೇಷ ಚೇತನರಾಗಿದ್ದು, ಅಂತರಾಷ್ಟ್ರೀಯ ಚೆಸ್ ಪಟು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪ್ರಾಥಮಿಕ ಹಾಗೂ ಪ್ರೌಢಶಾಲೆಯ
ಅಧ್ಯಯನವನ್ನು ಹೊನ್ನಾವರದ ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್ ಪಡೆದಿರುವ ಸಾನ್ವಿ ರಾವ್, ಭರತನಾಟ್ಯ, ಸಂಗೀತ, ಯಕ್ಷಗಾನ, ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆ, ಕವನ ಬರಹ, ಚೆಸ್ ಇತ್ಯಾದಿ ಕಲೆಗಳಲ್ಲಿ ನಿಪುಣತೆಯನ್ನು ಹೊಂದಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಇವರು ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿ.
ಇದನ್ನೂ ಓದಿ : ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿಗೆ ಶೇ.೧೦೦ ಫಲಿತಾಂಶ
ಉತ್ತಮ ಶಿಕ್ಷಣದ ಜೊತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಸಾಂಸ್ಕೃತಿಕ ಹಾಗು ಕ್ರೀಡೆಗಳಿಗೂ ಉತ್ತೇಜನ ನೀಡುವ ನಮ್ಮ ಕ್ರಿಯೇಟಿವ್ ಕಾಲೇಜಿನಲ್ಲಿ ನಾನು ಓದಿರುತ್ತೇನೆ ಎಂಬ ಹೆಮ್ಮೆ ನನ್ನದು. ಯಕ್ಷಗಾನ ಅಭ್ಯಸಿಸುವಂತೆ ಮಾಡಿ ಮೊಟ್ಟ ಮೊದಲ ಬಾರಿ ಪ್ರದರ್ಶಿಸುವಂತೆ ಮಾಡಿ, ಎನ್.ಎಸ್.ಎಸ್. ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಲು, ಭಾರತ ಸ್ಕೌಟ್ಸ್ & ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪಡೆಯಲು ಅವಕಾಶವನ್ನು ನನ್ನ ಕಾಲೇಜು ನೀಡಿದೆ. ಭರತನಾಟ್ಯ, ಸಂಗೀತ, ಭಾಷಣ, ಸಾಹಿತ್ಯ ಮುಂತಾದ ನನ್ನೆಲ್ಲ ಹವ್ಯಾಸಗಳಿಗೆ ಅವಕಾಶವನ್ನೂ ನಮ್ಮ ಕಾಲೇಜ್ ನೀಡಿದೆ. ವಿಶೇಷಚೇತನನಾದ ನನ್ನಣ್ಣನ ಎಂ.ಕಾಂ. ಪರೀಕ್ಷೆಗೆ ನನಗೆ ಸ್ಕ್ರೈಬರ್ ಆಗಿ ಬರೆಯಲು ನಮ್ಮ ಕಾಲೇಜಿನ ಎಲ್ಲಾ ಸಂಸ್ಥಾಪಕರು, ಉಪನ್ಯಾಸಕರು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಸಾನ್ವಿ ಸ್ಮರಿಸುತ್ತಾರೆ.
ಇದನ್ನೂ ಓದಿ : ಸಿದ್ದಾರ್ಥ ಪದವಿ ಪೂರ್ವ ಕಾಲೇಜಿಗೆ ಶೇ.೧೦೦ ಫಲಿತಾಂಶ
ನಾನು ಕ್ರಿಯೇಟಿವ್ ಕಾಲೇಜಿನ ಹಾಸ್ಟೆಲ್ನಲ್ಲಿ ಇದ್ದೆ. ಇಲ್ಲಿ ಓದಿನ ಹಾಗೂ ಆರೋಗ್ಯದ ಬಗ್ಗೆ ನೀಡುವ ಕಾಳಜಿ ಸದಾ ಸಹಕಾರಿಯಾಗಿದೆ. ಉದಾಹರಣೆಗೆ ನನಗೆ ಪರೀಕ್ಷೆಗೆ ಒಂದು ತಿಂಗಳು ಇರುವಾಗ ಕಾಲು ನೋವು ಅನುಭವಿಸುತ್ತಿರುವ ಸಂದರ್ಭದಲ್ಲಿ ನೂರಕ್ಕೆ ನೂರು ಓದಲು ಸಾಧ್ಯವಾಗಿರಲಿಲ್ಲ. ಆದರೆ ಮೊದಲಿನಿಂದ ನಿರಂತರವಾಗಿ ಓದುತ್ತಿದ್ದರೆ ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಬಾಧಕವಾಗಲಾರದು ಎಂಬುದು ನನ್ನ ಅನಿಸಿಕೆ. ಓದಿನೊಟ್ಟಿಗೆ ಇತರ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ, ಎನ್.ಎಸ್.ಎಸ್., ಸ್ಕೌಟ್ಸ್ & ಗೈಡ್ಸ್ ಸಂಸ್ಥೆಗಳ ಮೂಲಕ ಸಮಾಜ ಸೇವಾ ಕಾರ್ಯಗಳ್ಳಲ್ಲಿ
ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎನ್ನುತ್ತಾರೆ ಸಾನ್ವಿ.
ಮುಂದೆ ಉತ್ತಮ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂದು ಬಯಸಿದ್ದೇನೆ. ನಮ್ಮ ಕಾಲೇಜಿನಲ್ಲಿ ಸಿಎ ಫೌಂಡೇಶನ್ ತರಬೇತಿ ಪಡೆಯುತ್ತಿದ್ದೇನೆ.
– ಸಾನ್ವಿ ರಾವ್.