ಭಟ್ಕಳ : ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಸಾವಿಷ್ಕಾರ್ ಫೆಸ್ಟ್ ನಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್‌ಶಿಪ್ ನಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಇವರು ೩ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು  ಇಲ್ಲಿ ಒತ್ತಿ.

ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (೪ನೇ ವರ್ಷದ ಮೆಕ್ಯಾನಿಕಲ್), ಜುರೈಫ್ ಅಹ್ಮದ್ ಮತ್ತು ಮೊಹಮ್ಮದ್ ಮೀರಾನ್ ಮೊಹ್ತಿಶಾಮ್ (೨ನೇ ವರ್ಷದ ಎಲೆಕ್ಟ್ರಾನಿಕ್ಸ್) ಕುಂದಾಪುರದ ಎಂಐಟಿಯಲ್ಲಿ ನಡೆದ ಸಾವಿಸ್ಕಾರ್ ಫೆಸ್ಟ್ ನಲ್ಲಿ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : ಸಮುದ್ರದಲ್ಲಿ ಮುಳುಗಿ ಇಬ್ಬರು ಸಾವು

ಎಐಟಿಎಂ ಆಡಳಿತ ಮಂಡಳಿ, ಎಐಟಿಎಂ ಪ್ರಾಂಶುಪಾಲ ಡಾ.ಫಜಲುರ್ ರೆಹಮಾನ್ ಕೆ, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್ ಮತ್ತಿತರರು ಈ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.