ವಿಜಯಪುರ : ಜಿಲ್ಲೆಯ ಅಲ್ಲಲ್ಲಿ ನಿನ್ನೆ ಬಿಸಿಲಿನ ಬೆಗೆಯ ನಡುವೆ ವರುಣರಾಯ ತಂಪೆರೆದಿದ್ದಾನೆ. ವರುಣನ ಜೊತೆಗಾಗಮಿಸಿದ ಸಿಡಿಲು ಒಂದಿಷ್ಟು ಮನೆಗಳಲ್ಲಿ ಸೂತಕ ಆವರಿಸಿಕೊಳ್ಳುವಂತೆ ಮಾಡಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಬಾಲಕ ಮತ್ತು ವ್ಯಕ್ತಿ ಸೇರಿ ಇಬ್ಬರು ಬಲಿಯಾಗಿದ್ದಾರೆ. ಇಬ್ಬರೂ ಜಿಲ್ಲೆಯ ಇಂಡಿ ತಾಲೂಕಿನವರು.
ಇದನ್ನೂ ಓದಿ : ಪತಿಯಂತೆಯೇ ಮಹಾದಾನಿಯಾಗಿದ್ದ ಸುಧಾ ಆರ್.ಎನ್.ಶೆಟ್ಟಿ
ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿ ರಸ್ತೆ ಜಲದಪ್ಪನ ಕೆರೆಯ ಜಮೀನಿನಲ್ಲಿ ಸಿಡಿದು ಬಡಿದು ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಮೃತಪಟ್ಟ ಬಾಲಕನನ್ನ ಹದಿನಾರು ವರ್ಷದ ಭೀರಪ್ಪ ನಿಂಗಪ್ಪ ಅವರಾದಿ ಎಂದು ಗುರುತಿಸಲಾಗಿದೆ. ಗುಡುಗು ಸಹಿತ ಸಿಡಿಲಿಗೆ ಬಾಲಕ ಬಲಿಯಾಗಿದ್ದು, ಮೃತ ಬಾಲಕನ ಮನೆಗೆ ಸ್ಥಳೀಯ ಜೆಡಿಎಸ್‌ಮುಖಂಡ ಬಿ.ಡಿ.ಪಾಟೀಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಮೃತ ಬಾಲಕನ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇನ್ನೊಂದೆಡೆ ಇದೇ ಇಂಡಿ ತಾಲೂಕಿನ ಮಸಳಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಮೃತಪಟ್ಟ ರೈತನನ್ನ 45 ವರ್ಷದ ಸೋಮಶೇಖರ ಪಟ್ಟಣಶೆಟ್ಟಿ ಎಂದು ಗುರುತಿಸಲಾಗಿದೆ.
ಗಾಳಿ ಸಹಿತ ಭಾರೀ ಮಳೆ
ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಇನ್ನೂ ಕೆಲವೆಡೆ ಜಿಟಿ ಜಿಟಿ ಮಳೆಯಾಗಿದೆ. ಬಾಬಾನಗರ, ಬಿಜ್ಜರಗಿ, ದೇವರ ಹಿಪ್ಪರಗಿ ಸೇರಿದಂತೆ ಹಲೆವೆಡೆ ಜಿಟಿಜಿಟಿ ಮಳೆಯಾಗಿದೆ. ಈ ಬಾರಿ ಮಳೆ ಬೆಳೆ ಸಂಪೂರ್ಣ ಎಂದು ಕಾರ್ಣಿಕ ನುಡಿದಿದ್ದ ಕತಕನಹಳ್ಳಿಯ ಶಿವಯ್ಯ ಅಜ್ಜ ಅವರು ಮಳೆಗಾಗಿ ಶಿವನೇ ಒಂಟಿಗಾಲಲ್ಲಿ ನಿಂತಿದ್ದಾನೆ ಎಂದಿದ್ದರು. ಕತ್ನಳ್ಳಿಯ ಶಿವಯ್ಯ ಅಜ್ಜ ಕಾರ್ಣೀಕ ನುಡಿದ ಐದು ಗಂಟೆಯಲ್ಲಿಯೇ ವರುಣ ಧರೆಗಿಳಿದು ಬಂದಂತಾಗಿದೆ. ಇದರಿಂದಾಗಿ ವಿಜಯಪುರ ಜಿಲ್ಲೆಯ ಜನತೆ ಬಿಸಿಲಿನ ಬೇಗೆಯ ಬದಲಾಗಿ ತಂಪಿನ ಅನುಭವ ಪಡೆದಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಬರ ಮತ್ತು ರಣಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ಮಳೆರಾಯ ತಂಪೆರೆದರೆ, ಈ ಎರಡೂ ಕುಟುಂಬಗಳಲ್ಲಿ ಅದೇ ಮಳೆರಾಯ ಬರಸಿಡಿಲಿನಂತೆ ಅಪ್ಪಳಿಸಿರುವುದು ನೋವು ತರಿಸುವ ಸಂಗತಿಯಾಗಿದೆ.