ನವದೆಹಲಿ: ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ದ್ವಾರಕಾ ನಗರದಲ್ಲಿ ಅರಬ್ಬಿ ಸಮುದ್ರದ ಪಂಚಕುಯಿ ತೀರದ ಬಳಿ ಭಾನುವಾರ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

ಸ್ಕೂಬಾ ಡೈವಿಂಗ್ ಅನುಭವದ ಬಗ್ಗೆ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ’ ಎಂದು ಬರೆದಿದ್ದಾರೆ.

ಇದನ್ನೂ ಓದಿ : ಮಕ್ಕಳ ಹತ್ಯೆ ಮಾಡಿ ತಾಯಿ ಆತ್ಮಹತ್ಯೆ
ಗುಜರಾತ್‌ನ ఓಖ್ ಮತ್ತು ಬೆಟ್ ಸಂಪರ್ಕಿಸುವ ಸೇತುವೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಸೇತುವೆಯ ಸುತ್ತಲೂ ಓಡಾಡಿ ವೀಕ್ಷಣೆ ಮಾಡಿದ್ದಾರೆ. ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಈ ಸೇತುವೆ ದೇಶದಲ್ಲೇ ಅತಿ ಉದ್ದದ ಕೇಬಲ್ ಸೇತುವೆ ಎನ್ನಲಾಗುತ್ತಿದೆ. ಈ ಸೇತುವೆಗೆ ಸುದರ್ಶನ ಸೇತು ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ : ನೇತ್ರಾಣಿ ದ್ವೀಪಯಾನ – ಒಂದು ಅದ್ಭುತ ಅನುಭವ
ಸುದರ್ಶನ ಸೇತುವಿನ ಉದ್ದ 2.32 ಕಿಲೋಮೀಟರ್. 2.979 ಕೋಟಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇದು ದೇಶದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ.
ಇದಕ್ಕೂ ಮುನ್ನ ಮೋದಿ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ಪ್ರಧಾನಿಯವರಿಗೆ ಆತ್ಮೀಯವಾಗಿ ಸ್ವಾಗತಿಸಿ ತೀರ್ಥ ಪ್ರಸಾದ ನೀಡಿದರು. ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ.

ಈ ವಿಡಿಯೋ ನೋಡಿ : 29ರಿಂದ ಕಾಸ್ಮುಡಿ ಹನುಮಂತ ದೇವರ ಪುನರ್ ಪ್ರತಿಷ್ಠೆ  https://fb.watch/qqSWV7Hgck/?mibextid=Nif5oz