ಭಟ್ಕಳ : ಪದೇಪದೇ ರಸ್ತೆ ಅಗೆತದ ಬಗ್ಗೆ ಸ್ಥಳೀಯರು ಆಕ್ರೋಶದ ಹಿನ್ನೆಲೆ ಇಲ್ಲಿನ ಜಾಲಿ ಪಟ್ಟಣ ಪಂಚಾಯಿತಿಯ ಹಿಂದೂ ಕಾಲೋನಿಗೆ ಅಧಿಕಾರಿಗಳ ತಂಡ ಭೇಟಿ ನೀಡಿದೆ.

ಇದನ್ನೂ ಓದಿ : ಬಾವಿ ತೋಡುವಾಗ ಮರದ ಬೃಹತ್ ತುಂಡು ಪತ್ತೆ

ಕಾರವಾರದ ವಾಟರ್ ಬೋರ್ಡ್ ಅಧಿಕಾರಿ ಎಸ್ ಪಿ ಬಾಂದೇಕರ್ ಹಿಂದೂ ಕಾಲೋನಿಗೆ ಆಗಮಿಸಿ, ಪರೀಶೀಲನೆ ನಡೆಸಿದ್ದಾರೆ. ಯುಜಿಡಿ ಕಾಮಗಾರಿಗಾಗಿ ಪದೇಪದೇ ರಸ್ತೆ ಅಗೆತ ಮಾಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಕಾಡಾನೆ ಪ್ರತ್ಯಕ್ಷ

ಅವೈಜ್ಞಾನಿಕ ಕಾಮಗಾರಿಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಎರಡು ವರ್ಷಗಳಿಂದ ಇಲ್ಲಿ ಅಗೆತ ಪ್ರಾರಂಭವಾಗಿದೆ. ಪ್ರತಿ ವರ್ಷ ಅಗೆದು ಸರ್ಕಾರದ ಹಣವನ್ನು ಪೋಲ್ ಮಾಡಲಾಗುತ್ತಿದೆ. ಅಗೆದ ಜಾಗವನ್ನು ಸರಿಯಾಗಿ ತುಂಬಿಸುವದಿಲ್ಲ. ಇದರಿಂದ ಮಳೆ ಬಂದ ತಕ್ಷಣ ಅಗೆದಿರುವ ಜಾಗದಲ್ಲಿ ಮಣ್ಣು ಕುಸಿದು ನಡೆದಾಡಲೂ ಸಾದ್ಯವಾಗುತ್ತಿಲ್ಲ. ಎರಡು ವರ್ಷಗಳ ಹಿಂದೆ ಯುಜಿಡಿ ಕಾಮಗಾರಿಗೆ ಮೊದಲ ಬಾರಿಗೆ ಅಗೆಯುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭವಾಗಬೇಕಿತ್ತು. ಕಾಮಗಾರಿ ಮುಗಿದು ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಮತ್ತೆ ಒಡೆದು ಹಾಕಲಾಗಿದೆ. ಯುಜಿಡಿ ಹೆಸರಿನಲ್ಲಿ ಪದೇ ಪದೇ ರಸ್ತೆ ಅಗೆದು ಸ್ಥಳೀಯರ ತಾಳ್ಮೆ ಪರೀಕ್ಷಿಸಬೇಡಿ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಪದೇಪದೇ ರಸ್ತೆ ಅಗೆತಕ್ಕೆ ಸಾರ್ವಜನಿಕರ ಆಕ್ರೋಶ

ವಾಟರ್ ಬೋರ್ಡನ ಅಧಿಕಾರಿ ಎಸ್ ಪಿ ಬಾಂದೇಕರ್ ಮಾತನಾಡಿ, ಇದು ಯುಜಿಡಿಯ ಪಂಪ್ ಮಾಡಲು ಅಳವಡಿಸುವ ಪೈಪ್ ಆಗಿದೆ. ಹಿಂದಿನ ಬಾರಿ ಹಾಕಿದ ಪೈಪ್‌ಗೆ ಇದಕ್ಕೂ ಸಂಬಂಧವಿಲ್ಲ. ಇದನ್ನು ವೈಜ್ಞಾನಿಕವಾಗಿ ಅಳವಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇನೆ. ಪೈಪ್ ಅಗೆದ ಸ್ಥಳಕ್ಕೆ ಮಣ್ಣು ತುಂಬಿಸಿದ ಬಳಿಕ ನೀರು ಹಾಕಿ ಆ ಸ್ಥಳದಲ್ಲಿ ಯಾವುದೇ ವಾಹನ ಅಥವಾ ಪಾದಾಚಾರಿಗಳಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಲಾಗುವದು ಎಂದು ಭರವಸೆ ನೀಡಿದರು.


ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ, ಯುಜಿಡಿ ಎಂಜಿನಿಯರ್ ಅಜಯ ಪ್ರಭು, ವಿನಾಯಕ, ವಿಲ್ಸನ್, ವಾರ್ಡ್ ಕೌನ್ಸಿಲರ್ ಮಿಸ್ಬಾಹುಲ್ ಹಕ್, ಸ್ಥಳೀಯರಾದ ಇನಾಯತ್ ಗವಾಯಿ, ಇರ್ಷಾದ್ ಸದಾ, ನೌಫಿಲ್, ಇತರರು ಇದ್ದರು.