ಭಟ್ಕಳ: ಹುಬ್ಬಳ್ಳಿಯ ಅಮಾಯಕ ಹಿಂದೂ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ್ ಹತ್ಯೆಗೈದ ಜಿಹಾದಿ ಮಾನಸಿಕತೆಯ ಕೊಲೆಗಡುಕನನ್ನು ಉತ್ತರಪ್ರದೇಶ ಸರ್ಕಾರದ ಮಾದರಿಯಲ್ಲಿ ನಿರ್ದಾಕ್ಷಿಣ್ಯ ನೇರ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ವಿಶ್ವ ಹಿಂದೂ ಪರಿಷತ್  ಮತ್ತು  ಹಿಂದೂ ಸಂಘಟನೆ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ನಂತರ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ : ಕಾಸ್ಮುಡಿ ಹನುಮಂತ ದೇವಸ್ಥಾನದಲ್ಲಿ ಮಂಡಲ ಪೂಜೆ ಸಂಪನ್ನ

ಹುಬ್ಬಳ್ಳಿಯ ಅಮಾಯಕ ಹಿಂದೂ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಝ್ ಎನ್ನುವ ಜಿಹಾದಿ ಮಾನಸಿಕತೆಯನ್ನು ಹೊಂದಿರುವ ಯುವಕನು ಕಾಲೇಜ್ ಆವರಣದಲ್ಲಿ ಅಮಾನುಷವಾಗಿ ಕೊಲೆಗೈದಿದ್ದಾನೆ. ಇದನ್ನು ಸಮಸ್ತ ಹಿಂದೂ ಸಮಾಜ ಕಠೋರವಾಗಿ ಖಂಡಿಸುತ್ತದೆ. ಇದೊಂದು ಲವ್ ಜಿಹಾದ್‌ನ ಪೂರ್ವಾಗ್ರಹ ಪೀಡಿತ ಕಾರ್ಯಾಚರಣೆ. ಈ ಹಿಂದೆಯೂ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು ಇರುತ್ತದೆ. ಈಗಾಗಲೇ ಈ ಮೇಲಿನ ಘಟನೆಯು ಹಿಂದೂ ವಿದ್ಯಾರ್ಥಿನಿಯರಿಗೆ ಹಿಂದೂ ಹೆಣ್ಣು ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಆತಂಕವನ್ನು ಉಂಟುಮಾಡಿದೆ. ಇದಕ್ಕೆಲ್ಲ ಮುಖ್ಯ ಕಾರಣ ಇಂತಹ ದುಷ್ಟ ಮತಾಂಧ ಶಕ್ತಿಗಳ ವಿರುದ್ಧ ಈಗಿನ ರಾಜ್ಯ ಸರ್ಕಾರದ ಮೃಧು ಧೋರಣೆ. ಈ ಯುವತಿಯನ್ನು ಕೊಲೆಗೈಯುತ್ತಿರುವ ನೇರ ವಿಡಿಯೋ ಸಾಕ್ಷ್ಯಾಧಾರಗಳು ಇರುವುದರಿಂದ ಜಿಹಾದಿ ಮಾನಸಿಕತೆಯ ಈ ಯುವಕನನ್ನು ಕೂಡಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮುಖಾಂತರ ವಿಚಾರಣೆ ನಡೆಸಿ ಗಲ್ಲಿಗೇರಿಸಬೇಕು. ಅಥವಾ ಉತ್ತರ ಪ್ರದೇಶ ಮಾದರಿಯಲ್ಲಿ ನೇರ ಕ್ರಮ ಕೈಗೊಳ್ಳುವ ಮೂಲಕ ಇವರನ್ನು ಹತ್ತಿಕ್ಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಜಿಹಾದಿ ಮಾನಸಿಕತೆಯುಳ್ಳವರು ಲವ್ ಜಿಹಾದ್‌ನ ಷಡ್ಯಂತ್ರ ಬಳಸುತ್ತಾರೆ. ಇದರಿಂದ ಇನ್ನಷ್ಟು ಅಮಾಯಕ ಹಿಂದೂ ಯುವತಿಯರನ್ನು ಬಲಿ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಿನ ರಾಜ್ಯ ಸರ್ಕಾರವು ಮತಾಂಧರ ಹಾಗೂ ಜಿಹಾದಿ ಮಾನಸಿಕತೆಯುಳ್ಳವರ ತುಷ್ಟಿಕರಣದಲ್ಲಿ ತೊಡಗಿದೆ. ರಾಜ್ಯಪಾಲರು ಈ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್
ನಿರ್ದೇಶಕರಿಗೆ ಸ್ಪಷ್ಟ ಆದೇಶವನ್ನುಆದೇಶವನ್ನು ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ನೇರ ಹಾಗೂ ಕಠಿಣ ಕ್ರಮದ ಪರಿಣಾಮವಾಗಿ ಇಂದಿನ ದಿನಗಳಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಮತಾಂಧ ಶಕ್ತಿಗಳು ಹಾಗೂ ಕೊಲೆಗಡುಕರು ಹಿಂದೂ ಕಾರ್ಯಕರ್ತರನ್ನು ಹಾಗೂ ಅಮಾಯಕರನ್ನು ಕೊಲೆಗೈಯ್ಯಲು ಸಾವಿರ ಬಾರಿ ಯೋಚಿಸುವಂತೆ ಮಾಡಿದೆ. ಆದ ಕಾರಣ ಕರ್ನಾಟಕ ಸರ್ಕಾರ ಸಹ ಉತ್ತರಪ್ರದೇಶದ ಮಾದರಿಯಲ್ಲಿ ದುಷ್ಟ ಮತಾಂಧ ಶಕ್ತಿ ಹಾಗೂ ದೇಶದ್ರೋಹಿ ಸಂಘಟನೆಗಳನ್ನು ನಿಷೇದಿಸಬೇಕು. ಜೊತೆಗೆ ಕೊಲೆಗಡುಕರನ್ನು ನೇರ ಹಾಗೂ ನಿರ್ದಾಕ್ಷಿಣ್ಯ ಕ್ರಮದ ಮೂಲಕ ಅವರನ್ನು ಹತ್ತಿಕ್ಕಬೇಕು. ಮುಂದಿನ ದಿನಗಳಲ್ಲಿ ಯಾವುದೇ ಹಿಂದೂ ಯುವತಿಯರ ಹಾಗೂ ಅಮಾಯಕರ ಕಗ್ಗೋಲೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಶಂಕರ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಪ್ರಮುಖರಾದ ರಾಜೇಶ ನಾಯ್ಕ, ದಿನೇಶ ನಾಯ್ಕ, ಶೇಷಗಿರಿ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.