ಕುಮಟಾ: ತಾಲೂಕಿನ ಹೆಗಡೆ ಗ್ರಾಮ ಅಂದರೆ ವಾಲಿಬಾಲ್ ಆಟಕ್ಕೆ ಹೆಸರುವಾಸಿ. ವಾಲಿಬಾಲ್ ಆಡುವ ಅನೇಕ ಆಟಗಾರರನ್ನು ರಾಜ್ಯಕ್ಕೆ ದೇಶಕ್ಕೆ ಈಗಾಗಲೇ ಪರಿಚಯಿಸಿದೆ ಈ ಪುಟ್ಟ ಗ್ರಾಮ. ಈ ರೀತಿ ಪರಿಚಯವಾದ ಅನೇಕರು ಕ್ರೀಡಾ ಕೋಟಾದ ಮೂಲಕ ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಅನೇಕರು ರಾಜ್ಯ ಹಾಗೂ ಪರ ರಾಜ್ಯದ ತಂಡಗಳಲ್ಲಿ ಆಟಗಾರರಾಗಿ ತಮ್ಮ ಆಟ ಪ್ರದರ್ಶಿಸಿ “ಸೈ” ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : ಬರಗದ್ದೆ ಸೊಸೈಟಿ ಅವ್ಯವಹಾರ: ೭ ಜನರ ವಿರುದ್ಧ ದೂರು ದಾಖಲು
ಈ ಗ್ರಾಮದಲ್ಲಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ವಾಲಿಬಾಲ್ ಪಂದ್ಯಾವಳಿಗಳು ನಡೆದು ಜನರನ್ನು ತನ್ನತ್ತ ಆಕರ್ಷಿಸಿಕೊಂಡಿತ್ತು. ಆದರೆ ಸುಮಾರು ೨ ದಶಕದಿಂದ ಅಂತಹ ದೊಡ್ಡಮಟ್ಟದ ವಾಲಿಬಾಲ್ ಪಂದ್ಯಾವಳಿ ಸಂಘಟಿಸಿರಲಿಲ್ಲ. ಆದರೆ ಈಗ ಹೆಗಡೆಯ ವಾಲಿಬಾಲ್ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುವುದಕ್ಕಾಗಿ ಹೆಗಡೆಯ ಶ್ರೀ ಶಾಂತಿಕಾಂಬಾ ಯುವಕ ಸಂಘವು ಊರ ನಾಗರಿಕರ ಸಹಕಾರದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದೆ.
ಈ ಹಿಂದೆ ಹೆಸರಾಂತ ಕ್ರೀಡಾಪಟುಗಳು ಆಡಿದ್ದ ಹೆಗಡೆಯ ಶ್ರೀ ಶಾಂತಿಕಾಂಬಾ ಮೈದಾನದಲ್ಲಿ ಮೇ ೧೦, ೧೧ ಮತ್ತು ೧೨ ರಂದು ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಮೂರು ದಿನಗಳ ಕಾಲ ಸಂಜೆ ೭ ಗಂಟೆಯಿAದ ಆರಂಭವಾಗುವ ಈ ಪಂದ್ಯಾವಳಿಯಲ್ಲಿ ಅತಿಥೇಯ ಶ್ರೀ ಶಾಂತಿಕಾAಬಾ, ಹೆಗಡೆ, ಇಂಡಿಯನ್ ಆರ್ಮಿ, ಇಂಡಿಯನ್ ಓವರಸಿಸ್ ಬ್ಯಾಂಕ್(ಐ.ಓ.ಬಿ), ಕೇರಳ ಪೋಲಿಸ್, ಡೇಂಜರ್ ಬಾಯ್ಸ್, ತಮಿಳುನಾಡು ಹಾಗೂ ಕೇರಳದ್ದೇ ಆದ ಇನ್ನೊಂದು ತಂಡ- ಹೀಗೆ ಒಟ್ಟೂ ೬ ತಂಡಗಳು ಭಾಗವಹಿಸಲಿವೆ. ಈ ೬ ತಂಡಗಳಲ್ಲಿ ಹೆಸರಾಂತ ಆಟಗಾರರು ಆಡಲಿದ್ದಾರೆ ಎಂದು ಗೊತ್ತಾಗಿದೆ.
ಈ ವಾಲಿಬಾಲ್ ಪಂದ್ಯಾವಳಿಯನ್ನು ಸುಮಾರು ೮ ಸಾವಿರ ಜನ ಕುಳಿತು ವೀಕ್ಷಿಸುವಂತೆ ಗ್ಯಾಲರಿ ನಿರ್ಮಿಸಲು ಸಂಘಟಕರು ಈಗ ಚಿಂತನೆ ನಡೆಸಿದ್ದಾರೆ. ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಲೆಂದು ಕುಮಟಾ ಅರ್ಬನ್ ಬ್ಯಾಂಕಿನ ಹಾಲಿ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ರಾಜಕಾರಣಿಯ ಜೊತೆಗೆ ಸ್ಥಳೀಯರು ಆದ ಧೀರು ಶಾನಭಾಗ ಗೌರವಾಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಸೀತಾರಾಮ ಹೆಗಡೆ, ಉಪಾಧ್ಯಕ್ಷರಾಗಿ ಜಿ.ಪಿ.ನಾಯ್ಕ, ದಿನೇಶ ನಾಯ್ಕ, ವಿನಾಯಕ ಪಟಗಾರ, ಪ್ರಕಾಶ ಮಡಿವಾಳ, ಶ್ರೀಧರ ಗೌಡ, ಗಣೇಶ ಪಟಗಾರ, ಸಂಘಟನಾ ಕಾರ್ಯದರ್ಶಿಯಾಗಿ ಪವನ ಪ್ರಭು,
ಜಂಟಿ ಕಾರ್ಯದರ್ಶಿ ವಿನೋದ ನಾಯ್ಕ,
ಖಜಾಂಜಿಯಾಗಿ ಡಿ.ಎಸ್.ನಾಯ್ಕ ಹಾಗೂ ಶಿವಾನಂದ ದಿವಾಕರ, ಶ್ರೀ ಶಾಂತಿಕಾಂಬಾ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಿತಿ ಸದಸ್ಯರಾಗಿದ್ದಾರೆ.