ಹೊನ್ನಾವರ: ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜ್‌ನ ದ್ವಿತೀಯ ಪಿಯುಸಿ ( ಕಾಮರ್ಸ) ವಿದ್ಯಾರ್ಥಿನಿ ಹೊನ್ನಾವರದ ಸಾನ್ವಿ ರಾವ್ ೬೦೦ ಕ್ಕೆ ೫೯೮ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಹೊನ್ನಾವರದ ಸಾನ್ವಿ ರಾವ್ ೫ ವಿಷಯ ಗಳಲ್ಲಿ ೧೦೦ಕ್ಕೆ ೧೦೦ ಅಂಕ ಗಳಿಸಿದ್ದರು. ಇಂಗ್ಲೀಷ್ ನಲ್ಲಿ ೯೫ ಅಂಕ ಗಳಿಸಿದ್ದರು. ಈಗ ಇಂಗ್ಲೀಷ್ ವಿಷಯ ಮರು ಮೌಲ್ಯಮಾಪನ  ಮಾಡಿದ ಮೇಲೆ ೯೮ ಅಂಕ ಲಭಿಸಿದೆ. ಒಟ್ಟು ೬೦೦ ಕ್ಕೆ ೫೯೮ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಹೊನ್ನಾವರದ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜಗದೀಶ್ ರಾವ್ ಹಾಗೂ  ಹೊನ್ನಾವರ ಸರಕಾರಿ ಐ.ಟಿ.ಐ. ತರಬೇತಿ ಅಧಿಕಾರಿ ವಿನುತಾ ಭಟ್ ಇವರ ಹೆಮ್ಮೆಯ ಪುತ್ರಿ.

ಇದನ್ನೂ ಓದಿಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ