ಕುಮಟಾ: ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದ ಉಂಟಾದ ನೆರೆಯಿಂದ ಜನರನ್ನು ರಕ್ಷಿಸಲು ತಾಲೂಕಾಡಳಿತ ೧೮ ಕಾಳಜಿ ಕೇಂದ್ರ ತೆರೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸೋಮವಾರ ಹಾಗೂ ಮಂಗಳವಾರ ಒಟ್ಟೂ ೧೮ ಕಾಳಜಿ ಕೇಂದ್ರ ತೆರೆದು ೨೮೩ ಕುಟುಂಬದ ಒಟ್ಟೂ ೮೨೫ ಜನರನ್ನು ಸ್ಥಳಾಂತರಿಸಿದೆ. ಜುಲೈ ೧೫ರಂದು ಮೂರೂರು ಹಾಗೂ ಊರಕೇರಿಯ ಕಡವು ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಕಾಳಜಿಕೇಂದ್ರ ತೆರೆದು ಒಟ್ಟೂ ೫೦ ಜನರನ್ನು ಸ್ಥಳಾಂತರಿಸಲಾಗಿತ್ತು.
ಜುಲೈ ೧೬ರಂದು ಬೊಗ್ರಿಬೈಲ್, ಕರ್ಕಿಮಕ್ಕಿ, ಹೆಗಡೆ, ಮಣಕೋಣ, ದೀವಗಿ, ಖೈರೆ, ತಾರಿಬಾಗಿಲು, ಶಿರಗುಂಜಿ, ಕೊಡ್ಕಣಿ, ಉಪ್ಪಿನಪಟ್ಟಣ, ಹೆಗಡೆ, ಮೇಲಿನಕೇರಿ, ಬಾವಿಕೊಡ್ಡಲ, ಮಣಕಿ, ಗುಡ್ ಕಾಗಾಲಗಳಲ್ಲಿ ತಲಾ ಒಂದು ಹಾಗೂ ತೆಪ್ಪದಲ್ಲಿ ೨ ಕಾಳಜಿಕೇಂದ್ರ ತೆರೆಯಲಾಗಿದೆ. ದಿವಗಿ ಶಾಲೆಯಲ್ಲಿನ ಕಾಳಜಿ ಕೆಂದ್ರದಲ್ಲಿ ೨೮ ಕುಟುಂಬದ ೧೦೮ ಜನ ಹಾಗೂ ಖೈರೆ ಕಾಳಜಿ ಕೇಂದ್ರದಲ್ಲಿ ೬೮ ಕುಟುಂಬದ ೧೭೮ ಜನ ಆಶ್ರಯ ಪಡೆದುಕೊಂಡಿದ್ದಾರೆ. ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡವರಿಗೆ ಊಟ, ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಗುಡ್ಡಕುಸಿತ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ