ಭಟ್ಕಳ (Bhatkal): ರಕ್ತವನ್ನು ಸ್ವತಃ ತಯಾರಿಸಲು ಸಾಧ್ಯವಿಲ್ಲ. ಮನುಷ್ಯರಿಂದ ಮನುಷ್ಯರಿಗೆ ಕೊಡುವ ಕಾರಣಕ್ಕೆ ರಕ್ತದಾನ (blood donation) ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳ ತಾಲೂಕು ಆಸ್ಪತ್ರೆ , ಭಟ್ಕಳ ತಾಲೂಕಾ ವೈಧಾಧಿಕಾರಿಗಳ ಕಚೇರಿ, ಉಡುಪಿ (Udupi) ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಟ್ಕಳ ತಾಲೂಕು ಆಸ್ಪತ್ತೆಯಲ್ಲಿ ಶನಿವಾರ ನಡೆದ ಬೃಹತ್ ರಕ್ತದಾನ (blood donation) ಶಿಬಿರದಲ್ಲಿ ಮಾತನಾಡಿದರು.

ವಿಡಿಯೋ ಸಹಿತ ಇದನ್ನೂ ಓದಿ : ಪ್ರತಿಭಟನಾ ಸ್ಥಳದ ಬಳಿ ನೋಟಿಸ್ ಅಂಟಿಸಿದ ತಹಶೀಲ್ದಾರ ಕಚೇರಿ ಸಿಬ್ಬಂದಿ!

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಿನನಿತ್ಯವೂ ರಕ್ತದ ಅವಶ್ಯಕತೆ ಇರುತ್ತದೆ. ಈ ಹಿಂದೆ ಆಸ್ಪತ್ರೆಯಲ್ಲಿ ಬ್ಲಡ್ ಸ್ಟೋರೇಜ್ ಇತ್ತು. ತಿಂಗಳಿಗೆ ಒಮ್ಮೆಯಾದರೂ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿದ್ದೆವು. ಆದರೆ ಈಗ ರಕ್ತಕ್ಕಾಗಿ ಕುಂದಾಪುರ, ಉಡುಪಿ ಜಿಲ್ಲಾಸ್ಪತ್ರೆಯನ್ನು ಅವಲಂಬಿಸಿದ್ದೇವೆ. ಪ್ರತಿ ದಿನವೂ ನಾವು ಜಿಲ್ಲಾಸ್ಪತ್ರೆ ರಕ್ತನಿಧಿಯಿಂದ ರಕ್ತವನ್ನು‌ ಪಡೆಯುತ್ತಿದ್ದೇವೆ. ಇಷ್ಟೊಂದು ಪ್ರಮಾಣದಲ್ಲಿ ನಾವು ಅವರಿಂದ ರಕ್ತ ಪಡೆದುಕೊಳ್ಳುತ್ತಿರುವುದರಿಂದ ನಾವು ಅವರಿಗೆ ರಕ್ತದಾನ ಶಿಬಿರದ ಮೂಲಕ ನಮ್ಮ ಕಡೆಯಿಂದ ರಕ್ತ ನೀಡುವ ಸಲುವಾಗಿ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ಎರಡು ತಿಂಗಳಿಗೆ ಒಮ್ಮೆಯಾದರು ರಕ್ತದಾನ ಶಿಬಿರವನ್ನು ಏರ್ಪಡಿಸುವ ಇಚ್ಛೆಯನ್ನು ಹೊಂದಿದ್ದೇವೆ ಎಂದರು.

ಇದನ್ನೂ ಓದಿ : ಭಟ್ಕಳದ ರಾಹಿಕ್‌ ಸಹಿತ ಇಬ್ಬರ ಬಂಧನ

ಜಿಲ್ಲಾ ಆಸ್ಪತ್ರೆ ಉಡುಪಿಯ ರಕ್ತನಿಧಿಕೇಂದ್ರದ ಆಡಳಿತಾಧಿಕಾರಿ ಡಾ. ವೀಣಾ ಮಾತನಾಡಿ, ಭಟ್ಕಳ ತಾಲೂಕು ಆಸ್ಪತ್ರೆ ಅಗತ್ಯ ರಕ್ತಕ್ಕಾಗಿ ದೂರದ ಕಾರವಾರ ಅಥವಾ ಉಡುಪಿಯನ್ನು ಅವಲಂಬಿಸಿದೆ. ಈ ಹಿಂದೆ ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಲಡ್ ಸಬ್ ಸ್ಟೋರನ್ನು‌ (blood store) ಅಗತ್ಯವಿರುವ ತಾಂತ್ರಿಕ ವರ್ಗ ಪೂರೈಸಿ ಪುನಶ್ಚೇತನಗೊಳಿಸಬೇಕಾಗಿದೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ :  ಸಹಾಯಕ ಆಯುಕ್ತರ ಮನವಿಗೆ ಜಗ್ಗದ ಪ್ರತಿಭಟನಾಕಾರರು

ಈ ವೇಳೆ ಒಟ್ಟು ೩೬ ಶಿಬಿರಾರ್ಥಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌  ನಲ್ಲಿ ವೀಕ್ಷಿಸಬಹುದು.