ಭಟ್ಕಳ (Bhatkal): ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ರಾಜಾಂಗಣ ಮುಖ್ಯ ರಸ್ತೆಯಲ್ಲಿರುವ ಶ್ರೀ ನಾಗಬನ ದೇವರುಗಳಾದ ಶ್ರೀ ನಾಗ ಮತ್ತು ಜೈನ ನಾಗಯಕ್ಷೆ ದೇವರುಗಳ ಪುನರ್ ಪ್ರತಿಷ್ಠೆಯ ದ್ವಿತೀಯ ವರ್ಷದ ವಾರ್ಷಿಕ ವರ್ಧಂತಿ (Vardhanthi) ಪೂಜಾ ಮಹೋತ್ಸವ ಫೆ.೧೭ರಂದು ಜರುಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂದು ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ ೧ರಿಂದ ೩ರವರೆಗೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ.  ಇದೇ ಸಂದರ್ಭದಲ್ಲಿ (Vardhanthi) ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ ನೆರವೇರಲಿದೆ.

ಇದನ್ನೂ ಓದಿ : Prajakeeya/ ಮಕ್ಕಳಿಗೆ ಪ್ರಜಾಕೀಯ ಹೆಸರಿಟ್ಟ ಉಪೇಂದ್ರ ಅಭಿಮಾನಿ

ಬ್ಯಾಂಕ್ ಖಾತೆಯ ಕ್ಯೂ ಆರ್ ಕೋಡ್

ಅತ್ಯಂತ ಪುಣ್ಯಕಾರ್ಯವಾದ ಅನ್ನಸಂತರ್ಪಣೆಗೆ ನಗದು ಮತ್ತು ವಸ್ತು ರೂಪದಲ್ಲಿ ದೇಣಿಗೆ ನೀಡಬಹುದಾಗಿದೆ. ಹೊರೆಕಾಣಿಕೆ ಸಲ್ಲಿಸುವವರು ಫೆ.೧೬ರ ರವಿವಾರ ಸಂಜೆ ೫ರೊಳಗಾಗಿ ಸನಿಹದ ಶ್ರೀ ಕರಿಬಂಟ ದೇವಸ್ಥಾನಕ್ಕೆ ತಂದು ಮುಟ್ಟಿಸಬಹುದಾಗಿದೆ. ಧನಸಹಾಯ ಮಾಡುವವರು ಯುನಿಯನ್ ಬ್ಯಾಂಕ್ ನ ರಾಜಾಂಗಣ ನಾಗಬನ ಅಭಿವೃದ್ಧಿ ಸಮಿತಿಯ ಖಾತೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಜಮಾ ಮಾಡಬಹುದಾಗಿದೆ. ಅಲ್ಲದೆ, ಶ್ರೀ ದೇವರಿಗೆ ರಜತ ಕವಚ ಸಮರ್ಪಿಸಲು ಸಂಕಲ್ಪಿಸಲಾಗಿದೆ. ಇದಕ್ಕೆ ವೆಚ್ಚ ೭ ಲಕ್ಷ ರೂ. ಅಂದಾಜಿಸಲಾಗಿದೆ. ಆದರೆ, ಬೆಳ್ಳಿಯ ಬೆಲೆ ಏಕಾಏಕಿ ತೀವ್ರ ಹೆಚ್ಚಳವಾಗಿದ್ದರಿಂದ, ಅಂದಾಜಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಅಗತ್ಯವಿರುವುದರಿಂದ, ಭಕ್ತರ ಆರ್ಥಿಕ ಸಹಾಯ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : Bhatkal/ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡ ವೃದ್ಧ

ಕ್ಷೇತ್ರ ಹಿನ್ನೆಲೆ
ಈ ಕ್ಷೇತ್ರಪಾಲವು ಸುಮಾರು ೫೦೦  ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಕಾಲಾನಂತರದಲ್ಲಿ ಕ್ಷೇತ್ರದ ವೈಭವವನ್ನೇ ಕಳೆದುಕೊಂಡಂತಾಗಿತ್ತು. ತದನಂತರ ಕ್ಷೇತ್ರದ ಗತಸ್ಥಿತಿಯನ್ನು ನೋಡಿ ಭಕ್ತರು ಶ್ರೀ ರಾಜಾಂಗಣ ನಾಗಬನ ಅಭಿವೃದ್ಧಿ ಸಮಿತಿ ರಚಿಸಿ ಜೀರ್ಣೋದ್ಧಾರಕ್ಕೆ ಮುನ್ನುಡಿ ಬರೆದರು. ಶ್ರೀ ಕ್ಷೇತ್ರದ ಕಳೆ ಬರಹಗಳನ್ನು ಕಲೆಹಾಕಿ ಶ್ರೀ ಕ್ಷೇತ್ರಕ್ಕೆ ಕಳೆ ಕೊಟ್ಟು ಶ್ರೀ ದೇವರುಗಳ ಪುನರ್ ಪ್ರತಿಷ್ಠೆ ಮಾಡಲಾಗಿದೆ.

ಇದನ್ನೂ ಓದಿ : Lokayukta raid/ ಕೆಯುಡಿಎ ಅಧಿಕಾರಿ ಬಂಧನ