ಬೆಳಗಾವಿ :ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಮೆದುಳಿನ ರಕ್ತ ಸ್ರಾವ ಸಂಭವಿಸಿದೆ ಎಂದು ವರದಿಯಾಗಿದೆ. ಜಿಗಜಿಣಗಿ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

71 ವರ್ಷದ ರಮೇಶ ಜಿಗಜಿಣಗಿ ಕರ್ನಾಟಕದ ರಾಜ್ಯದ ಶಾಸಕ, ಸಂಸದ, ರಾಜ್ಯ ಮತ್ತು ಕೇಂದ್ರದ ಸಚಿವರಾಗಿದ್ದರು. ಈ ಮೊದಲು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರವನ್ನು ಮೂರು ಸಲ ಗೆದ್ದಿದ್ದರು.

ರಮೇಶ್ ಜಿಗಜಿಣಗಿ ಅವರು 1998, 1999 ಮತ್ತು 2004ರಲ್ಲಿ ಚಿಕ್ಕೋಡಿ ಲೋಕಸಭೆ ಚುನಾವಣಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2009, 2014 ಮತ್ತು 2019ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1983 ರಿಂದ 98ರ ತನಕ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಅಚ್ಚರಿಯ ಆಯ್ಕೆ : ಓವೈಸಿ ವಿರುದ್ಧ ತ್ರಿವಳಿ ತಲಾಖ್ ಹೋರಾಟಗಾರ್ತಿ

ಈ ವಿಡಿಯೋ ನೋಡಿ : ಕರಡಿ ಮರಿಗಳ ಮುದ್ದಿನ ಆಟ  https://fb.watch/qzRk_DXNAQ/?mibextid=Nif5oz