ಭಟ್ಕಳ: ಸೈಕಲ್ಲಿಗೆ ಬೈಕ್ ಡಿಕ್ಕಿಯಾಗಿ (Bike collided) ಸವಾರರಿಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಟ್ಕಳ (Bhatkal) ತಾಲೂಕಿನ ಶಿರಾಲಿಯಲ್ಲಿ ಫೆ ೨೨ರಂದು ಮಧ್ಯಾಹ್ನ ೨.೪೫ರ ಸುಮಾರಿಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೋಟೆಲ್ ಕೆಲಸ ಮಾಡಿಕೊಂಡಿರುವ ಶಿರಾಲಿ ಮಾಸ್ತಿಕಟ್ಟೆ ನಿವಾಸಿ ನಾರಾಯಣ ಮಾಸ್ತಪ್ಪ ನಾಯ್ಕ (೫) ಗಾಯಗೊಂಡ ಸೈಕಲ್ ಸವಾರ. ಬೈಕ್ ಸವಾರ ಕಾಯ್ಕಿಣಿ ತೆರ್ನಮಕ್ಕಿಯ ಲೋಕೇಶ ಧರ್ಮ ನಾಯ್ಕ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾರೆ ಕೆಲಸ ಮಾಡಿಕೊಂಡಿರುವ ಶಿರಾಲಿಯ ಗುಡಿಹಿತ್ತಲ ನಿವಾಸಿ ಹರೀಶ ಭದ್ರಯ್ಯ ನಾಯ್ಕ (೩೨) ದೂರು ದಾಖಲಿಸಿದ್ದಾರೆ.
bike collision/ ಕಿತ್ರೆ ಕ್ರಾಸ್ ಬಳಿ ಬೈಕುಗಳ ಮುಖಾಮುಖಿಯಲ್ಲಿ ನಾಲ್ವರಿಗೆ ಗಾಯ
ನಾರಾಯಣ ನಾಯ್ಕ ತಮ್ಮ ಸೈಕಲ್ ಮೇಲೆ ಮನೆಗೆ ಹೋಗುತ್ತಿರುವಾಗ ಶಿರಾಲಿಯ ಶ್ರೀ ಕೃಷ್ಣ ಪ್ರಸಾದ ಹೊಟೇಲ ಎದುರಿಗೆ ರಾಷ್ಟ್ರೀಯ ಹೆದ್ದಾರಿ (National Highway) ೬೬ರಲ್ಲಿ ಭಟ್ಕಳದಿಂದ ಮುರ್ಡೇಶ್ವರ (Murudeshwar) ಕಡೆಗೆ ಹೋಗುತ್ತಿದ್ದ ಬೈಕ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿಯಾಗಿದೆ (Bike collided). ಸೈಕಲ್ ಸವಾರ ರಸ್ತೆ ಮೇಲೆ ಬಿದ್ದು, ತಲೆ, ಮುಖಕ್ಕೆ ಮತ್ತು ಭುಜಕ್ಕೆ ಗಾಯಗಳಾಗಿದ್ದು, ಬೈಕ್ ಸವಾರನ ತಲೆ, ಮುಖ ಮತ್ತು ಕೈಕಾಲಿಗೆ ಗಾಯಗಳಾಗಿವೆ. ಬೈಕ್ ಸವಾರನ ಅತಿ ವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.



