ಭಟ್ಕಳ: ಇಲ್ಲಿನ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ೧೦ ತಿಂಗಳು ಕಳೆದರೂ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕಿರಣ ನಾರಾಯಣ ಶಿರೂರು ಶುಕ್ರವಾರ ಪುರಸಭೆ ಕಚೇರಿ ಎದುರು ಶಾಂತ ರೀತಿಯಲ್ಲಿ ಧರಣಿ (protest) ನಡೆಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವೇಳೆ ಮಾತನಾಡಿದ ಅವರು, ”ದಲಿತ ಸಮುದಾಯಕ್ಕೆ ಸೇರಿದ ನಾನು ತೃತೀಯ ದರ್ಜೆಯ ಗುತ್ತಿಗೆದಾರನಾಗಿದ್ದು, ಎರಡು ಸ್ಥಳಗಳಲ್ಲಿ ಒಟ್ಟು ಸುಮಾರು ೭ ಲಕ್ಷ ರೂ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ಕಾಮಗಾರಿ ನಿರ್ವಹಣೆಗೆ ಸಾಲ ಪಡೆದುಕೊಂಡಿದ್ದು, ಬಿಲ್ ಪಾವತಿ ವಿಳಂಬದಿಂದ ಒತ್ತಡ ಎದುರಿಸುತ್ತಿದ್ದೇನೆ. ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ತಹಶೀಲ್ದಾರ ಹಾಗೂ ಮುಖ್ಯಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ” ಎಂದು ಆರೋಪಿಸಿದರು.

Yakshagana/ ‘ಯಕ್ಷ’ ಪ್ರೇಮಿಗಳ ‘ಹೃದಯ’ ಮೀಟುವ ‘ತಜ್ಞ’ ವೈದ್ಯ

”೨೦೨೪- ೨೫ನೇ ಸಾಲಿನ ೧೫ನೇ ಹಣಕಾಸು ಅನುದಾನ ಭಾಗಶಃ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನುದಾನ ಬಿಡುಗಡೆಯಾಗದಿದ್ದರೂ ಹೊಸ ಟೆಂಡರ್ ಕಾಮಗಾರಿಗೆ ಒತ್ತಡ ಹೇರುತ್ತಿರುವುದು ಮಾನಸಿಕ ಹಿಂಸೆ ನೀಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ೧೦ ದಿನಗಳಲ್ಲಿ ಬಿಲ್ ಪಾವತಿಸದಿದ್ದರೆ ಉಪವಾಸ ಸತ್ಯಾಗ್ರಹ (protest) ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

Case filed/ ಗಾಂಜಾ ಸೇವಿಸಿದ ನಾಲ್ವರ ವಿರುದ್ಧ ಪ್ರಕರಣ