ಭದ್ರಾವತಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಭದ್ರಾವತಿ ತಾಲ್ಲೂಕು ೭ ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಮಾ.೧೦ ರ ಶನಿವಾರ ಮತ್ತು ೧೧ ರ ಭಾನುವಾರದಂದು ಸಿದ್ದಾರೂಢ ನಗರದಲ್ಲಿರುವ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದೆ.

ಇದನ್ನೂ ಓದಿ : ಪಾಕ್ ಪರ ಘೋಷಣೆ ಖಂಡಿಸಿ ಪ್ರತಿಭಟನೆ

ಇದರ ಸಮ್ಮೇಳನಾಧ್ಯಕ್ಷರನ್ನಾಗಿ ಭದ್ರಾವತಿಯ ಮೂಲದ ಹಾಗೂ ಹಾಲಿ ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಜಿ.ಧನಂಜಯ ರವರನ್ನು ಆಯ್ಕೆ ಮಾಡಲಾಗಿದೆ. ಪರಿಷತ್ ನ ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷರಿಗೆ ಅವರ ನಿವಾಸದಲ್ಲಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದರು.

ಈ ವಿಡಿಯೋ ನೋಡಿ : ಮತ್ತೆ ಹಾರಾಡಿದ ಭಗವಾಧ್ವಜ  https://fb.watch/qBIxe0iRHA/?mibextid=Nif5oz

ಜಿಲ್ಲಾ ಅಧ್ಯಕ್ಷ ಹೆಚ್.ಎನ್.ಮಹಾರುದ್ರ, ಪ್ರದಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ಸಮ್ಮೇಳನದ ಕಾರ್ಯಾಧ್ಯಕ್ಷ ಜಗದೀಶ್ ಕವಿ, ತಾಲ್ಲೂಕು ಅಧ್ಯಕ್ಷ ಎಸ್.ಎನ್.ಮಲ್ಲಿಕಾರ್ಜುನಯ್ಯ, ವಿರುಪಾಕ್ಷಪ್ಪ, ಹೆಚ್.ಮಲ್ಲಿಕಾರ್ಜುನ್, ಡಾ.ಹೆಚ್.ವಿ.ನಾಗರಾಜ್, ಬಿ.ಜಿ.ವಸಂತ ಕುಮಾರ್, ಬಿ.ಜಿ.ಬಸವರಾಜ್, ಮಲ್ಲಿಕಾಂಬ, ಆರ್.ಡಿ.ಜಯಶೀಲ, ಡಿ.ಇಂಚರ, ಪರಿಷತ್ ನ ಗೌರವ ಅಧ್ಯಕ್ಷ ಎಂ.ವಿರುಪಾಕ್ಷಪ್ಪ ರವರು ಸೇರಿದಂತೆ ಇತರರು ಉಪಸ್ಥಿತರಿದ್ದರು.