ಭಟ್ಕಳ: ಎಲ್ಲಿಯವರೆಗೆ ಸಂಸ್ಕಾರ ಸರಿಯಾಗಿ ಬೆಳೆಸಿಕೊಳ್ಳಲಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಧರ್ಮದ ನಿಜ ಚಿತ್ರಣವನ್ನು ಪಡೆಯಲಿಕ್ಕೆ ಆಗುವುದಿಲ್ಲ ಎಂದು ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ : ದೇಶದ ರಕ್ಷಣೆಗಾಗಿ ಬಿಜೆಪಿ ಗೆಲ್ಲಿಸಬೇಕು : ಸಂಸದ ಅನಂತಕುಮಾರ
ಅವರು ಭಟ್ಕಳದ ಕರಿಕಲ್ ಸಮುದ್ರ ತೀರದಲ್ಲಿರುವ ಶ್ರೀರಾಮನ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ನೆರೆದ ಭಕ್ತರಿಗೆ ಆಶೀರ್ವಚನ ನೀಡಿದರು. ಈ ಹಿಂದೆ ನಮ್ಮ ಪೂರ್ವಜರು ನಮಗೆ ಧರ್ಮಕ್ಕೆ ಆಧಾರವಾಗಿ ನೀತಿ ನಿಯಮವನ್ನು ತಿಳಿಸಿದ್ದರು. ಇಂದಿನ ಆಧುನಿಕ ಯುಗದಲ್ಲಿ ಧರ್ಮದ ವೈಭವೀಕರಣ ಆಗುತ್ತಿದೆ. ನಾವು ಕೋಟಗಟ್ಟಲೆ ಹಾಕಿ ದೇವಸ್ಥಾನ ಕಟ್ಟಿಸುತ್ತೇವೆ. ಆದರೆ ನಾವು ದೇವರ ಮಂಗಳಾರತಿ ಸಮಯದಲ್ಲಿ ನಮಗೆ ಇರಲು ಸಾಧ್ಯವಾಗುವುದಿಲ್ಲ. ಸಂಸ್ಕಾರದ ಕೊರತೆಯಿಂದ ಇಂದು ಧರ್ಮವನ್ನು ಮರೆಯುತ್ತಿದ್ದೇವೆ. ಭಜನೆ , ಯಜ್ಞ, ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ಎಲ್ಲಿ ಹೆಚ್ಚು ಹೆಚ್ಚಾಗಿ ಆಗುತ್ತದೆಯೋ ಅಲ್ಲಿ ಭಗವಂತನ ಆಕರ್ಷಣೆ ಹೆಚ್ಚಿರುತ್ತದೆ. ಶ್ರದ್ಧಾ ಕೇಂದ್ರಗಳು ಎಲ್ಲೆಡೆ ಆಗಿ ರಾಮರಾಜ್ಯದ ಕನಸು ಸಾಕಾರವಾಗಬೇಕು ಎಂದರು.
ಈ ವಿಡಿಯೋ ನೋಡಿ : ತೆಂಗಿನಗುಂಡಿಯಲ್ಲಿ ಮತ್ತೆ ಹಾರಾಡಿದ ಭಗವಾಧ್ವಜ https://fb.watch/qBSdUZcdkR/?mibextid=Nif5oz
ಕಾರ್ಯಕ್ರಮದ ಪೂರ್ವದಲ್ಲಿ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಸ್ವಾಗತಿಸಿದರು. ಆಸರಕೇರಿ ಗುರುಮಠದ ಉಪಾಧ್ಯಕ್ಷ ಎಂ.ಕೆ.ನಾಯ್ಕ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮದ ಪೂರ್ವದಲ್ಲಿ ಭಟ್ಕಳ ನಾಮಧಾರಿ ಗುರುಮಠದ ಆಡಳಿತ ಮಂಡಳಿ ಹಾಗೂ ಶಿರಾಲಿ ಸಾರದಹೊಳೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯವರಿಂದ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿತು. ವರ್ಧಂತಿ ಉತ್ಸವದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ರಾಮತಾರಕ ಮಹಾಯಜ್ಞ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ಅನ್ನಸಂತರ್ಪಣೆ
ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ, ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ, ಶಿರಾಲಿ ಸಾರದಹೊಳೆ ಹಳೇ ಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ.ನಾಯ್ಕ, ಎಲ್.ಎಸ್.ನಾಯ್ಕ, ಹೊನ್ನಾವರದ ವಾಮನ ನಾಯ್ಕ, ಎಂ.ಜಿ.ಎಂ. ಬ್ಯಾಂಕಿನ ಅಧ್ಯಕ್ಷ ಈರಪ್ಪ ಗರ್ಡಿಕರ ಉಪಸ್ಥಿತರಿದ್ದರು. ಉ.ಕ., ದ.ಕ., ಉಡುಪಿ ಜಿಲ್ಲೆಯ ಭಕ್ತಾದಿಗಳು ಆಗಮಿಸಿ, ಸ್ವಾಮೀಜಿಯವರಿಂದ ಮಂತ್ರಾಕ್ಷತೆ ಪಡೆದರು.