ಭಟ್ಕಳ: ಶರಾಬ್ಬಿ ಹೊಳೆ ಮಾಲಿನ್ಯ ನಿರ್ಮೂಲನೆಗೆ ಮುಂದಿನ ವಾರ ಸಭೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಆಯುಕ್ತೆ ಡಾ.ನಯನಾ ಭರವಸೆ ಹೇಳಿದ್ದಾರೆ.
ಅವರು ತಮ್ಮನ್ನು ಭೇಟಿಯಾದ ಶರಾಬ್ಬಿ ನದಿ ರಕ್ಷಿಸಿ ಹೋರಾಟ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಮತದಾರರ ಚೀಟಿ ನೋಂದಣಿ ಶಿಬಿರ ಯಶಸ್ವಿ

ಈ ನಿಟ್ಟಿನಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ಘೌಸಿಯಾ ಬೀದಿಯ ವೆಟ್‌ವೆಲ್‌ನ ಬೇರಿಂಗ್ ಸಾಮರ್ಥ್ಯ ಮತ್ತು ತಗ್ಗು ಪ್ರದೇಶಕ್ಕೆ ನೀರು ಹರಿಸುವುದರಿಂದ ಆಗಬಹುದಾದ ಹಾನಿಯನ್ನು ನಿರ್ಣಯಿಸಲಾಗುತ್ತದೆ. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ನಯನಾ ತಿಳಿಸಿದ್ದಾರೆ.

ಈ ವಿಡಿಯೋ ನೋಡಿ :  https://fb.watch/qGHWRlX3G6/?mibextid=Nif5oz

ಭಟ್ಕಳದ ಜನರ ಜೀವನದಿಯಾಗಿರುವ ಈ ಹೊಳೆಯನ್ನು ರಕ್ಷಿಸಬೇಕು. ಅದರ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಶರಾಬ್ಬಿ ನದಿ ರಕ್ಷಿಸಿ ಹೋರಾಟ ಸಮಿತಿಯು ಇತ್ತೀಚೆಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣೆಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಇದರ ಮುಂದುವರಿದ ಭಾಗವಾಗಿ ನಿಯೋಗವು ಸಹಾಯಕರನ್ನು ಭೇಟಿಯಾಗಿ ಇಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ.


ಹೋರಾಟ ಸಮಿತಿಯ ನಿಯೋಗದಲ್ಲಿ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ, ಡಾ.ಮುಹಮ್ಮದ್ ಹನೀಫ್ ಶಬಾಬ್, ಅಬ್ದುಲ್ ಸಮಿ ಮೆಡಿಕಲ್, ಕೆ.ಎಂ.ಅಶ್ಫಾಕ್, ಮುಹಮ್ಮದ್ ಹುಸೇನ್, ಮುಸ್ತಫಾ ಅಸ್ಕರಿ, ಶಮೂನ್ ಹಾಜಿ ಫಖಿ, ಮುಬಾಶಿರ್ ಹಲ್ಲಾರೆ, ಮೌಲಾನಾ ಇರ್ಷಾದ್ ನದ್ವಿ ಮತ್ತಿತರರು ಇದ್ದರು.