ಭಟ್ಕಳ ಡೈರಿ ವರದಿ
ಭಟ್ಕಳ: ಆಟೋ ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಘಟನೆ ಅಕ್ಟೋಬರ್ ೧೭ರಂದು ಭಟ್ಕಳದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಅಕ್ಟೋಬರ್ ೧೭ರಂದು ಸಂಜೆ ಸುಮಾರು ೪.೩೦ರ ವೇಳೆಗೆ ಹೊಸ ಬಸ್ ನಿಲ್ದಾಣದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಆಟೋ ರಿಕ್ಷಾ ಬಾಡಿಗೆ ವಿಚಾರವಾಗಿ ಮಹ್ಮದ್ ಗೌಸ್ ಸಲ್ಮಾನ್ (೨೩) ಮತ್ತು ಸುಭಾಷ ರಾಮದಾಸ ದೇವಾಡಿಗ (೩೪) ನಡುವೆ ಜಗಳ ನಡೆದಿದೆ. ಈ ವೇಳೆ ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದು, ಸಾರ್ವಜನಿಕ ಶಾಂತತೆಗೆ ಭಂಗ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ ಎಸ್. ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–೨೦೨೩ರ ಕಲಂ ೧೯೪(೨)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ :
ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಅಪರಾಧ ಪ್ರಕರಣಗಳಿಂದ ವಿದ್ಯಾರ್ಥಿಗಳ ಸಾಧನೆಯವರೆಗೆ ಸಮಗ್ರ ನೋಟ
ಭಟ್ಕಳದಲ್ಲಿ ಓಸಿ ಜುಗಾರಾಟ: ವ್ಯಕ್ತಿ ವಿರುದ್ಧ ಪ್ರಕರಣ




