ಶಿವಮೊಗ್ಗ: ಬಿಎಸ್​ವೈರವರು ನನ್ನ ಆತ್ಮೀಯ ಸ್ನೇಹಿತರು ಇಬ್ಬರು ಒಂದೆ ತಟ್ಟೆಯಲ್ಲಿ ಊಟ ಮಾಡುತ್ತಿದ್ದವರು. ಆದರೂ ನನಗೆ ಮೋಸ ಮಾಡಿದರು ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

ಈ ವಿಡಿಯೋ ನೋಡಿ : ಈಶ್ವರಪ್ಪ ಗರಂ  https://fb.watch/qNBp1pb9_G/?mibextid=Nif5oz

ಟಿಕೆಟ್ ಆಕಾಂಕ್ಷಿಯಾಗಿದ್ದ ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗುತ್ತಿದ್ದಂತೆ ಕೆ.ಎಸ್​.ಈಶ್ವರಪ್ಪನವರು ತುರ್ತು ಸುದ್ದಿಗೋಷ್ಟಿ ಕರೆದು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧವೇ ನೇರವಾಗಿ ಹಾವೇರಿ ಕ್ಷೇತ್ರದ ಟಿಕೆಟ್ ಮಿಸ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಬಂಗಾರಪ್ಪ ಕುಟುಂಬ ಒಂದಾಗಿಸಲು ನಾನ್ಯಾರು? : ನಟ ಶಿವರಾಜಕುಮಾರ ಪ್ರಶ್ನೆ

ತಮ್ಮ ತೀರ್ಮಾನವನ್ನು ತಮ್ಮ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಜೊತೆಗೆ ಮಾತನಾಡಿ ತೀರ್ಮಾನ ಮಾಡುತ್ತೇನೆ. ರಾಧಾ ಮೋಹನ್ ಅಗರ್​ ಲಾಲ್​ ರವರು ಬೆಂಗಳೂರಿಗೆ ಕರೆದಿದ್ದಾರೆ. ಈಗ್ಯಾಕೆ ಹೋಗಲಿ? ಟಿಕೆಟ್ ಘೋಷಣೆ ಮಾಡಿಯಾಗಿದೆ. ಯಾಕೆ ಹೋಗಿ ಮಾತನಾಡಲಿ? ಏನು ಲಾಭವಿದೆ?ನನ್ನ ಮಗ ವರ್ಷದ ಕೆಳಗೆ ಹಾವೇರಿಯಲ್ಲಿ ಓಡಾಡಲಿ ಎಂದಾಗ ಬಿಎಸ್​​ವೈ ಟಿಕೆಟ್​ ಕೊಡಿಸುತ್ತೇನೆ, ನಾನೇ ಓಡಾಡಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದರು. ಇವತ್ತು ಮೋಸ ಮಾಡಿದ್ದಾರೆ. ಯಾಕೆ ಅನ್ನುವುದು ಗೊತ್ತಿಲ್ಲ. ಕಾರ್ಯಕರ್ತರಿಗೆ ನೋವಾಗಿದೆ. ಪಕ್ಷವೂ ಉಳಿಯಬೇಕು, ಕಾರ್ಯಕರ್ತರ ನೋವಿನ ಧ್ವನಿಯು ಆಗಬೇಕು ಎಂದಿದ್ದಾರೆ.

ಪಕ್ಷೇತರವಾಗಿ ನಿಲ್ಲಬೇಕು, ನಿಮ್ಮನ್ನ ಗೆಲ್ಲಿಸುತ್ತೇವೆ ಎಂಬ ಬಹಳ ಒತ್ತಡ ಇದೆ. ಬಹಳಷ್ಟು ಜನರ ಬಗ್ಗೆ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನಿಸುತ್ತೇನೆ. ಮಾ.೧೫ರ ಸಭೆಯಲ್ಲಿ ಈ ಬಗ್ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಗ್ಗೆ ತೀರ್ಮಾನ ಮಾಡುತ್ತೇನೆ. ನಾನು ಪಾರ್ಟಿ ಬಿಟ್ಟು ಹೋಗುತ್ತೇನೆ ಎಂದಾಗಲಿ, ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಹೇಳಿಲ್ಲ. ಅಭಿಪ್ರಾಯ ಸಂಗ್ರಹ ಮಾಡುತ್ತೇನೆ ಎಂದು ಹೇಳಿದ್ದೇನೆ.

ಆಕಸ್ಮಾತ್​ ಆಗಿ ಈ ಚುನಾವಣೆಯಲ್ಲಿ ನಾನು ನಿಂತರೇ ಕೇಂದ್ರದ ನಾಯಕರಿಗೆ ಅರ್ಥವಾಗುತ್ತದೆ. ಈಶ್ವರಪ್ಪನಂತಹ ನಿಷ್ಟಾವಂತ ಕಾರ್ಯಕರ್ತರು ಯಾಕೆ ನಿಂತರು ಎಂದು ಅರ್ಥವಾಗುತ್ತದೆ. ಒಂದೇ ಕುಟುಂಬದ ಕೈಗೆ ಪಕ್ಷ ಯಾಕೆ ಕೊಟ್ರು. ಅವರೇ ನಾಯಕರೇ? ಅವರೇ ಲಿಂಗಾಯತ ನಾಯಕರಾ ಅಂತಾ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ನಾಳಿನ ಸಭೆ ನಂತರ ನೀಡುತ್ತೇನೆ ಎಂದಿದ್ದಾರೆ.

ನಾನು ಜಾತಿ ನಾಯಕ ಎಂದು ಆಗಿಲ್ಲ. ಅದು ಹೆಮ್ಮೆಯ ವಿಚಾರ. ಹಿಂದುತ್ವದ ಪ್ರತಿಪಾದನೆ ಮಾಡಿದ್ದೇನೆ. ಬಿಜೆಪಿ ನಾಯಕರಿಗೆ ಯಡಿಯೂರಪ್ಪನವರು ಮೋಸ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆಯವರ ಟಿಕೆಟ್ ಯಾರ ಕೈಯಲ್ಲಿ ಇತ್ತು. ಬೊಮ್ಮಾಯಿಯವರು ಹೇಳಿದ್ದರು. ನಾನು ನಿಲ್ಲೋದಿಲ್ಲ ಎಂದು. ಆದರೂ ಅವರಿಗೆ ಟಿಕೆಟ್​ ಕೊಟ್ಟಿದ್ದಾರೆ. ಸಾಕಷ್ಟು ಜನರನ್ನ ಹಿಂಧೆ ಸರಿಸಿದ್ದಾರೆ. ತಾಯಿಗೆ ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್​ ಸಿಂಹ , ಸಿಟಿ ರವಿ, ನಳೀನ್ ಕುಮಾರ್ ಕಟೀಲ್​, ಸದಾನಂದ ಗೌಡ ಹೀಗೆ ಸಾಕಷ್ಟು ಜನರಿಗೆ ಅನ್ಯಾಯವಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಯಡಿಯೂರಪ್ಪನವರಿಂದ ಅನ್ಯಾಯವಾಗಿದೆ ಎಂದ ಕೆ.ಎಸ್​.ಈಶ್ವರಪ್ಪ, 40 ವರ್ಷದಿಂದ ಬಿಜೆಪಿಯಲ್ಲಿ ದುಡಿದಿದ್ದೇನೆ. ಆದರೂ ಹಠ ಹಿಡಿದು ಯಡಿಯೂರಪ್ಪ ಹೀಗೆ ಮಾಡಿದ್ದಾರೆ. ಹಠ ಹಿಡಿದು ಬೊಮ್ಮಾಯಿ , ಶೋಭಾರವರಿಗೆ ಟಿಕೆಟ್ ಕೊಡಿಸಿದ್ದಾರೆ. ಶೋಭಾ ಕರಂದ್ಲಾಜೆ ದೆಹಲಿಗೆ ಹೋಗಲಿಲ್ಲ. ಆದಾಗ್ಯೂ ಹಠ ಹಿಡಿದು ಯಡಿಯೂರಪ್ಪನವರು ಟಿಕೆಟ್ ಕೊಡಿಸಿದ್ದಾರೆ. ಹಾಗೆಯೇ ಹಠ ಹಿಡಿದು ನನ್ನ ಮಗನಿಗೆ ಟಿಕೆಟ್ ಕೊಡಿಸಬಹುದಿತ್ತು. ಆದರೂ ಆ ಆಸಕ್ತಿ ಯಾಕೆ ಬರಲಿಲ್ಲ ಎಂಬುದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಹಲವರಿಗೆ ಅನ್ಯಾಯವಾಗಿದೆ ಎಂದಿರುವ ಕೆ.ಎಸ್​. ಈಶ್ವರಪ್ಪ, ನಾನು ಮೋದಿ ಅವರ ಅಭಿಮಾನಿ, ಪಕ್ಷೇತರವಾಗಿ ನಿಲ್ಲಬೇಕೆ ಬೇಡವೇ ಇನ್ನೂ ತೀರ್ಮಾನ ಮಾಡಿಲ್ಲ. ನನ್ನ ಪಕ್ಷದ ಅಭಿಮಾನಿಗಳು , ನನ್ನ ಕಾರ್ಯಕರ್ತರು, ನನ್ನ ಹಿತೈಷಿಗಳು ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಆನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ನಾನು ಸಭೆ ನಡೆಸುತ್ತಿರುವುದು ಪರ್ಯಾಯವಾಗಿ ಏನೇನು ಮಾಡಬೇಕು ಎನ್ನುವುದಕ್ಕಲ್ಲ, ಅನೇಕ ನಾಯಕರನ್ನ ಹಿಂದೆ ಸರಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ಸಾಧನೆಗಾಗಿ ತಾಯಿಯ ಕತ್ತು ಹಿಸುಕುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಭಾರತೀಯ ಜನತಾ ಪಾರ್ಟಿ ನಮ್ಮ ತಾಯಿಯಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ತಾಯಿ ರೀತಿಯ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ ಎಂದಿದ್ದೇನೆ ಎಂದು ತಿಳಿಸಿದರು.

ಬಸವರಾಜ್ ಬೊಮ್ಮಾಯಿ ಯವರೇ ಚುನಾವಣಾ ಸಮಿತಿಯಲ್ಲಿ ಕಾಂತೇಶ್​ರವರನ್ನ ಹಾವೇರಿಯಲ್ಲಿ ನಿಲ್ಲಿಸಿ ಎಂದು ಹೇಳಿದ್ದರು. ಅವರನ್ನೇ ಒತ್ತಾಯ ಮಾಡಿಸಿ ಚುನಾವಣೆಗೆ ಯಾಕೆ ನಿಲ್ಲಿಸುತ್ತಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನ ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿ ಬಂದಿದೆ. ಈ ಸಂಬಂಧ ತಮ್ಮ ಹಿತೈಷಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇನೆ. ಹಿಂದುತ್ವದ ಪರವಾಗಿ ಮಾತನಾಡುವವರನ್ನ ಪಕ್ಕಕ್ಕೆ ಇಡಲಾಗುತ್ತಿದೆ. ಈ ಕೆಲಸವನ್ನು ಮಾನ್ಯ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆ ಹೊರಬಿದ್ದಿದೆ. ಇಡೀ ರಾಜ್ಯದ ಜನರು ನೋವನ್ನ ಅನುಭವಿಸುತ್ತಿದ್ದಾರೆ. ನಿಷ್ಟಾವಂತ ಕಾರ್ಯಕರ್ತರಿಗೆ ಯಡಿಯೂರಪ್ಪನವರು ಅನ್ಯಾಯ ಮಾಡುತ್ತಿದ್ದಾರೆ ಎಂಬ ನೋವಿಗೆ ನಾನು ಅವರುಗಳ ಧ್ವನಿಯಾಗಬೇಕಲ್ವವೇ ಎಂದು ಪ್ರಶ್ನಿಸಿದರು.

ಕಾಂತೇಶ್​ರವರಿಗೆ ವಿಧಾನಪರಿಷತ್​ ಸ್ಪರ್ಧೆಗೆ ಅವಕಾಶ ಮಾಡಿಕೊಡುತ್ತೇನೆ ಎಂದಿದ್ಧಾರೆ. ಪದವಿಧರ ಕ್ಷೇತ್ರದಿಂದ ಸ್ಪರ್ಧೆಗೆ ಅನುಕೂಲ ಮಾಡಿಕೊಡುತ್ತೇನೆ ಎಂದಿದ್ದಾರೆ. ರಾಧಾ ಮೋಹನ್ ಅಗರವಾಲ್ ರವರು ಹೇಳಿದ್ದಾರೆ ಎಂದ ಈಶ್ವರಪ್ಪ, ಬಿಎಸ್​ವೈರವರು ನನ್ನ ಆತ್ಮೀಯ ಸ್ನೇಹಿತರು. ಇಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದವರು. ಅವರ ದೋಷಗಳನ್ನು ನಾನು ಹೇಳಿದ್ದೆ. ನಮಗೆ ಇನ್ನೊಬ್ಬ ಯಡಿಯೂರಪ್ಪ ಸಿಗೋದಿಲ್ಲ ಎಂದಿದ್ದೆ. ಅವರ ವಿರುದ್ಧ ಆರೋಪಗಳನ್ನ ನಾವು ಕೇಳಲು ಸಾಧ್ಯವಾಗುತ್ತಿರಲಿಲ್ಲ. ಆಗ ನನ್ನ ವೈಯಕ್ತಿಕ ವಿಚಾರಗಳು ಎಂದು ಹೇಳಿದಾಗ, ಅವರ ವಿಚಾರದಿಂದ ನಾನು ಹಿಂದೆ ಸರಿದೆ. ಆನಂತರ ಕೆಜೆಪಿಗೆ ಹೋಗಿದ್ರು. ನಾನು ಹೋಗ್ಲಿಲ್ಲ. ಈ ಥರ ನನ್ನ ಮಾತು ಕೇಳ್ತಿಲ್ಲ ಎಂಬ ವಿಚಾರದಲ್ಲಿ ಅವರಿಗೆ ಬೇಸರ ಆಗಿರಬಹುದು. ಈ ನಿಟ್ಟಿನಲ್ಲಿ ಮಾ. ೧೫ ರಂದು ನಡೆಯಲಿರುವ ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆ ಎಂಬುದನ್ನ ನೋಡೋಣ ಎಂದ ಈಶ್ವರಪ್ಪ ನನ್ನ ಪ್ರಾಣ ಹೋದರೂ ನರೇಂದ್ರ ಮೋದಿಯವರನ್ನ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.

ಈ ವಿಡಿಯೋ ನೋಡಿ : ಮಕ್ಕಳಿಂದ ಪಾಲಕರ ಪಾದಪೂಜೆ  https://fb.watch/qNAEeSH_aJ/?mibextid=Nif5oz