ಭಟ್ಕಳ ಡೈರಿ ವರದಿ
ಭಟ್ಕಳ: ವಿಜಯದಶಮಿ ಸಂಭ್ರಮಕ್ಕೆ ಭಟ್ಕಳ ನಗರ ಸಜ್ಜಾಗುತ್ತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವತಿಯಿಂದ ನಾಳೆ (ನವೆಂಬರ್ ೧) ನಗರದಲ್ಲಿ ಭವ್ಯ ಪಥಸಂಚಲನ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ಸಿದ್ಧತೆಗಳು ಭರದಿಂದ ಸಾಗಿವೆ.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಪತಾಕೆಗಳು ಹಾಗೂ ವಿವಿಧ ಅಲಂಕಾರಗಳನ್ನು ಅಳವಡಿಸಲಾಗಿದ್ದು, ಭಟ್ಕಳ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ಪಥಸಂಚಲನವನ್ನು ಯಶಸ್ವಿಗೊಳಿಸಲು ಸಂಘದ ಸ್ವಯಂಸೇವಕರು ಹಾಗೂ ಹಿಂದೂ ಸಮಾಜದ ಪ್ರಮುಖರು ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೊಂದೆಡೆ, ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿರುವ ಆರ್ಎಸ್ಎಸ್ನ ಘೋಷ್ ತಂಡವು ನಗರದ ವಿವಿಧೆಡೆ ತಾಲೀಮು ನಡೆಸುತ್ತಿದೆ. ಶಿಸ್ತಿನ ಹೆಜ್ಜೆಗಳೊಂದಿಗೆ ಸಾಗುವ ಸ್ವಯಂಸೇವಕರಿಗೆ ಘೋಷ್ ತಂಡದ ವಾದ್ಯಗಳ ನಾದ ವಿಶೇಷ ಮೆರುಗು ನೀಡಲಿದೆ.
ಆರ್ಎಸ್ಎಸ್ನ ಪಥಸಂಚಲನ ಹಾಗೂ ಪ್ರಮುಖ ಉತ್ಸವಗಳಲ್ಲಿ ಘೋಷ್ ತಂಡ ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದು, ತಂಡದ ಅಭ್ಯಾಸ ಇದೀಗ ಗಮನ ಸೆಳೆಯುತ್ತಿದೆ. ಒಟ್ಟಾರೆ, ರಾಷ್ಟ್ರಭಕ್ತಿ ಮತ್ತು ಸಂಘಟನಾ ಶಿಸ್ತಿನ ಸಂದೇಶ ಸಾರಲಿರುವ ವಿಜಯದಶಮಿ ಪಥಸಂಚಲನವನ್ನು ಕಣ್ತುಂಬಿಕೊಳ್ಳಲು ಭಟ್ಕಳ ನಗರದಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ನ.೧ರ ಆರ್ಎಸ್ಎಸ್ ಪಥಸಂಚಲನ: ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ
ಭಟ್ಕಳದಲ್ಲಿ ನವೆಂಬರ್ ೧ರಂದು ಆರ್ಎಸ್ಎಸ್ ಭವ್ಯ ಪಥಸಂಚಲನ: ಇಲ್ಲಿದೆ ಸಂಪೂರ್ಣ ಮಾರ್ಗ



