ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಶಿರಾಲಿಯ ಚಿತ್ರಾಪುರದಲ್ಲಿ ಮನೆಯೊಂದರ ಮುಂಬಾಗಿಲಿನ ಇಂಟರ್‌ಲಾಕ್ ಹಾಗೂ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಿತ್ರಾಪುರದ ರೈಲ್ವೆ ಬ್ರಿಡ್ಜ್ ಸಮೀಪ ನಿವಾಸಿಯಾಗಿರುವ ಶ್ರೀದೇವಿ ವೆಂಕಟರಮಣ ಭಟ್ (೬೫) ದೂರು ನೀಡಿದ್ದಾರೆ.

ಯಾರೋ ಅಪರಿಚಿತ ಕಳ್ಳರು ಮನೆಯ ಮುಂಬಾಗಿಲಿನ ಇಂಟರ್‌ಲಾಕ್ ಹಾಗೂ ಬೀಗವನ್ನು ಮುರಿದು ಒಳಪ್ರವೇಶಿಸಿ, ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಚೆಸ್ ಪಂದ್ಯಾವಳಿಯಲ್ಲಿ ಭಟ್ಕಳದ ಗುರು ಸುಧೀಂದ್ರ ಕಾಲೇಜಿಗೆ ದ್ವಿತೀಯ ಸ್ಥಾನ; ಇಬ್ಬರು ವಿದ್ಯಾರ್ಥಿನಿಯರಿಗೆ ಯುನಿವರ್ಸಿಟಿ ಬ್ಲೂ ಗೌರವ

ಸರಾಬಿ ನದಿಗೆ ಒಳಚರಂಡಿ ನೀರಿನ ಕಂಟಕ: ಕೊಳಚೆ ಹರಿವು ನಿಲ್ಲದಿದ್ದರೆ ಪ್ರತಿಭಟನೆಗೆ ನಿವಾಸಿಗಳ ಸಿದ್ಧತೆ