ಭಟ್ಕಳ ಡೈರಿ ವರದಿ

ಭಟ್ಕಳ: ನಗರದ ಅಮೀನಾ ಪ್ಯಾಲೇಸ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದರೆಂಬ ಆರೋಪದ ಮೇರೆಗೆ ನಾಲ್ವರು ಯುವಕರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಅಕ್ಟೋಬರ್ ೨೦ರಂದು ರಾತ್ರಿ ಸುಮಾರು ೭.೩೦ ಗಂಟೆಗೆ ನಡೆದಿತ್ತು.

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಆರೋಪದ ಮೇರೆಗೆ ನಾಲ್ವರನ್ನು ಪೊಲೀಸರು ಪತ್ತೆಹಚ್ಚಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ನವೆಂಬರ್ ೪ರಂದು ವೈದ್ಯಕೀಯ ಪರೀಕ್ಷೆಯ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದು, ನಾಲ್ವರೂ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳನ್ನು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅಸಾದ್ (೨೫) ಮತ್ತು ಶಾಹಿದ್ ಶರೀಫ್ (೨೬), ಭಟ್ಕಳದ ವ್ಯಾಪಾರಿಗಳಾದ ಮಹ್ಮದ್ ರುಸ್ದಾನ್ (೨೫) ಹಾಗೂ ಅಬ್ದುಲ್ ಖಾದಿರ್ (೨೩) ಪ್ರಕರಣದಲ್ಲಿ ಹೆಸರಿಸಲಾದವರು. ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ರೈಲ್ವೆ ಬ್ರಿಡ್ಜ್ ಸಮೀಪದ ಮನೆ ಗುರಿ: ಬಾಗಿಲಿನ ಇಂಟರ್‌ಲಾಕ್, ಬೀಗ ಮುರಿದು ಒಳನುಗ್ಗಿದ ಕಳ್ಳರು!

ಚೆಸ್ ಪಂದ್ಯಾವಳಿಯಲ್ಲಿ ಭಟ್ಕಳದ ಗುರು ಸುಧೀಂದ್ರ ಕಾಲೇಜಿಗೆ ದ್ವಿತೀಯ ಸ್ಥಾನ; ಇಬ್ಬರು ವಿದ್ಯಾರ್ಥಿನಿಯರಿಗೆ ಯುನಿವರ್ಸಿಟಿ ಬ್ಲೂ ಗೌರವ