ಭಟ್ಕಳ ಡೈರಿ ವರದಿ

ಭಟ್ಕಳ: ನಗರದ ಹಳೇ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇಲೆ ೫೦ ವರ್ಷದ ವ್ಯಕ್ತಿಯೊಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ನವೆಂಬರ್ ೪ರಂದು ಸಂಜೆ ಸುಮಾರು ೭ ಗಂಟೆಗೆ ಹಳೇ ಬಸ್ ನಿಲ್ದಾಣದ ಸಮೀಪದ ಪಾನ್‌ಬೀಡಾ ಅಂಗಡಿಯ ಎದುರು ಈ ಘಟನೆ ನಡೆದಿದೆ. ಭಟ್ಕಳದ ಮಹೇಶ ಕುಪ್ಪಯ್ಯ ದೇವಾಡಿಗ (೫೦) ಎಂಬವರು ಸಾರ್ವಜನಿಕರಿಂದ ಹಣ ಪಡೆದು, ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ತನ್ನ ಲಾಭಕ್ಕಾಗಿ ಓಸಿ ಮಟ್ಕಾ ಜುಗಾರಾಟ ನಡೆಸುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಪೊಲೀಸರು ದಾಳಿ ನಡೆಸಿ, ಆರೋಪಿತನಿಂದ ₹೯೨೦ ನಗದು ಹಣ ಹಾಗೂ ಜುಗಾರಾಟಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ ೭೮(೩)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯ ಉಪನಿರೀಕ್ಷಕ ತಿಮ್ಮಪ್ಪ ಎಸ್. ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಅಮೀನಾ ಪ್ಯಾಲೇಸ್ ಎದುರು ಗಾಂಜಾ ಸೇವನೆ: ಭಟ್ಕಳದ ಇಬ್ಬರು ಸೇರಿ ನಾಲ್ವರ ವಿರುದ್ಧ ಕೇಸು

ರೈಲ್ವೆ ಬ್ರಿಡ್ಜ್ ಸಮೀಪದ ಮನೆ ಗುರಿ: ಬಾಗಿಲಿನ ಇಂಟರ್‌ಲಾಕ್, ಬೀಗ ಮುರಿದು ಒಳನುಗ್ಗಿದ ಕಳ್ಳರು!