ಉಡುಪಿ : ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ದೋಣಿಯನ್ನು ದರೋಡೆ ಮತ್ತು ಅಪಹರಣದ ಆರೋಪ ಹೊತ್ತಿದ್ದ ಭಟ್ಕಳದ ಏಳು ಮೀನುಗಾರರಿಗೆ ಉಡುಪಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ : ಪ್ರವಾಸಿ ತಾಣವನ್ನಾಗಿ ಹಳೇಕೋಟೆ ಕ್ಷೇತ್ರ ಅಭಿವೃದ್ಧಿ
ಸಂತೋಷ ದೇವಿ ಖಾರ್ವಿ, ಗೋಪಾಲ ಮಾದೇವ್ ಖಾರ್ವಿ, ಹರೀಶ್ ನಾರಾಯಣ ಖಾರ್ವಿ, ಸುಬ್ರಹ್ಮಣ್ಯ ತಿಮ್ಮಪ್ಪ ಖಾರ್ವಿ, ರಾಘವೇಂದ್ರ ಮಂಜುನಾಥ್ ಖಾರ್ವಿ, ನಾಗೇಶ ನಾರಾಯಣ ಖಾರ್ವಿ (ಎಲ್ಲರೂ ಭಟ್ಕಳ ಮಾವಿನಕುರ್ವೆ ಬಂದರು), ಶಿರಾಲಿ ಅಳ್ವೆಕೋಡಿಯ ಲಕ್ಷ್ಮಣ ಶಾನಿಯಾರ್ ಮೊಗೇರ್ ಜಾಮೀನು ಪಡೆದ ಮೀನುಗಾರರು.
ಈ ವಿಡಿಯೋ ನೋಡಿ : ಮಿರ್ಚಿ ಬೊಡಾ, ಮಂಡಕ್ಕಿ ಸವಿದ ಹ್ಯಾಟ್ರಿಕ್ ಹೀರೊ https://www.facebook.com/share/r/yexxyZJZv6HWRZWe/?mibextid=oFDknk
ಕುಂದಾಪುರದ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಅವರು ಭಟ್ಕಳದ ಮೀನುಗಾರರ ಪರ ವಕಾಲತ್ತು ವಹಿಸಿದ್ದರು. ಆರೋಪಿಗಳಿಗೆ ದರೋಡೆ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ ರವಿಕಿರಣ ಮುರ್ಡೇಶ್ವರ ಅವರು, ಭಟ್ಕಳ ತೀರದ ಬಳಿ ಆಳಸಮುದ್ರ ಮೀನುಗಾರಿಕಾ ದೋಣಿಗಳು ಆಪಾದಿತ ಅತಿಕ್ರಮಣದಿಂದ ವಿವಾದ ಉದ್ಭವಿಸಿದೆ ಎಂದು ಒತ್ತಿ ಹೇಳಿದರು.
ವಿವಾದದ ಹಿನ್ನೆಲೆ :
ಫೆಬ್ರವರಿ ೨೭ರಂದು ಭಟ್ಕಳ ಕರಾವಳಿಯ ನಿರ್ಬಂಧಿತ ಪ್ರದೇಶದಲ್ಲಿ ಮಲ್ಪೆಯ ಕೃಷ್ಣ ಪ್ರಸಾದ್ ಮತ್ತು ಮಂಗಳೂರಿನ ಖಿಲ್ರಿಯಾ ಎಂಬ ಎರಡು ಮೀನುಗಾರಿಕಾ ದೋಣಿಗಳು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿವೆ ಎಂದು ಭಟ್ಕಳ ಮೀನುಗಾರರ ಆರೋಪದಿಂದ ಸಂಘರ್ಷ ಉಂಟಾಗಿತ್ತು. ಮೀನುಗಾರರು ಈ ದೋಣಿಗಳನ್ನು ಭಟ್ಕಳ ಬಂದರು ದಡಕ್ಕೆ ಎಳೆದು ತಂದಿದ್ದರು. ನಿರ್ಬಂಧಿತ ವಲಯದ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್‌ಗೆ ಈ ಹಿಂದೆ ಭಟ್ಕಳದ ಮೀನುಗಾರರು ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಜಾರಿ ಕೊರತೆಯಿಂದ ನಿರಾಶೆಗೊಂಡ ಅವರು ಫೆಬ್ರವರಿ 27 ರ ಘಟನೆಯಲ್ಲಿ ಭಾಗಿಯಾಗಿದ್ದ ಎರಡು ದೋಣಿಗಳನ್ನು ವಶಪಡಿಸಿಕೊಂಡಿದ್ದರು. ಮಂಗಳೂರು ಬೋಟಿನ ಮಾಲೀಕರು ರಾಜಿ ಸಂಧಾನಕ್ಕೆ ಬಂದಿದ್ದರು. ಆದರೆ, ಮಲ್ಪೆ ಬೋಟ್ ಮಾಲೀಕ ಕೃಷ್ಣ ಪ್ರಸಾದ್ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಏಳು ಭಟ್ಕಳ ಮೀನುಗಾರರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ : ಮಲ್ಪೆ ಪೊಲೀಸರಿಂದ ಭಟ್ಕಳ ಮೀನುಗಾರರ ಬಂಧನ