ಶಿರಸಿ: ಸ್ವಂತ ಪರಿಶ್ರಮದಿಂದ ಎಲೆಕ್ಟ್ರಿಕ್ ಬೈಕ್ ಕಂಪನಿ ಹುಟ್ಟು ಹಾಕಿ ಇತರರಿಗೆ ಮಾದರಿಯಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಯುವಕ ಗಣಪತಿ ಸೋಡಿಗದ್ದೆ ಸಾಧನೆ ಅದ್ಭುತವಾದದ್ದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಈ ವರದಿ ನೋಡಿ : ಷೋಡಶ ಪವಿತ್ರ ನಾಗಮಂಡಲೋತ್ಸವ ಸಂಪನ್ನ
ಅವರು ಶಿರಸಿಯ ಜಾತ್ರಾ ಮಳಿಗೆಯಲ್ಲಿ ಇ- ಝೂನ್ ಇಲೆಕ್ಟ್ರಿಕ್ ಬೈಕ್‌ನ ಪ್ರಚಾರ ಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದರು. ನಮ್ಮ ಜಿಲ್ಲೆಯ ಯುವಕನೋರ್ವ ಪ್ರಪ್ರಥಮವಾಗಿ ನೂತನ ಬೈಕ್ ಕಂಪನಿ ಸ್ಥಾಪಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಜಿಲ್ಲೆಯ ಗ್ರಾಹಕರು ಇವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಆಶಿಸಿದರು.
ಈ ವಿಡಿಯೋ ನೋಡಿ : ಭಟ್ಕಳದಲ್ಲಿ ಷೋಡಶ ಪವಿತ್ರ ನಾಗಮಂಡಲೋತ್ಸವ https://fb.watch/qY_BXASRnv/?mibextid=Nif5oz
ಈ ಸಂದರ್ಭದಲ್ಲಿ ಇ-ಝೋನ್ ಬೈಕ್ ಕಂಪನಿಯ ಮಾಲಕ ಗಣಪತಿ ಸೋಡಿಗದ್ದೆ, ಪ್ರಮುಖರಾದ ವೆಂಕಟೇಶ ಹೊಸಬಾಳೆ, ಶ್ರೀನಿವಾಸ ನಾಯ್ಕ, ಜಯಂತ ಭಟ್, ಉದ್ಯಮಿ ಪ್ರವೀಣ ತೆಪ್ಪಾರ, ದತ್ತಾತ್ರೆಯ ನಾಯ್ಕ, ಪಾಂಡುರಂಗ ನಾಯ್ಕ, ಜಗದೀಶ ನಾಯ್ಕ, ಮತ್ತಿತರು ಉಪಸ್ಥಿತರಿದ್ದರು.