ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿಯ ಹಿಂದೂ ಕಾಲೋನಿಯಿಂದ ಹಾದು ಹೋಗುವ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಾಗಿ ಪದೇಪದೇ ರಸ್ತೆ ಅಗೆಯುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆ ಮುಂದೂಡಿಕೆ

ಕಳೆದ ಎರಡು ವರ್ಷಗಳಿಂದ ಇಲ್ಲಿ ರಸ್ತೆ ಅಗೆತ ಮಾಡಲಾಗುತ್ತಿದೆ. ಪ್ರತಿ ವರ್ಷ ಅಗೆದು ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ. ಅಗೆದ ಜಾಗವನ್ನು ಸರಿಯಾಗಿ ತುಂಬಿಸುವುದಿಲ್ಲ. ಇದರಿಂದ ಮಳೆ ಬಂದ ತಕ್ಷಣ ಅಗೆದಿರುವ ಜಾಗದಲ್ಲಿ ಮಣ್ಣು ಕುಸಿದು ನಡೆದಾಡಲೂ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿ : ಷೋಡಶ ಪವಿತ್ರ ನಾಗಮಂಡಲೋತ್ಸವ  https://fb.watch/qZmdKFPLo1/?mibextid=Nif5oz

ಈಗ ಮತ್ತೆ ಮಳೆ ಆರಂಭವಾಗಲಿದೆ. ಇದರಿಂದ ಮತ್ತೆ ಸ್ಥಳೀಯರು ಸಂಕಷ್ಟ ಅನುಭವಿಸಬೇಕಿದೆ. ಈ ಹಿಂದೆಯೂ ಹೀಗೆ ರಸ್ತೆ ಅಗೆದಿದ್ದರಿಂದ ಭೂಮಿ ಕುಸಿದು ಶಾಲಾ ಬಸ್ಸುಗಳು ರಸ್ತೆಗೆ ಸಿಲುಕಿಕೊಂಡಿತ್ತು. ನಂತರ ಶಾಲಾ ಬಸ್ಸುಗಳು ಈ ಪ್ರದೇಶಕ್ಕೆ ಬರುವುದನ್ನೇ ನಿಲ್ಲಿಸಿದ್ದವು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಜಿಡಿ ಹೆಸರಿನಲ್ಲಿ ಪದೇಪದೇ ರಸ್ತೆ ಅಗೆದು ಸ್ಥಳೀಯರ ತಾಳ್ಮೆ ಪರೀಕ್ಷಿಸಬಾರದು. ಒಂದು ಬಾರಿ ಅಗೆಯುವಾಗ ಎಲ್ಲಾ ಪ್ಲಾನ್ ಮಾಡಿಕೊಂಡು ಅನುಷ್ಠಾನ ಮಾಡುತ್ತಿಲ್ಲ. ಸರ್ಕಾರದ ಹಣದ ಜೊತೆಗೆ ಸ್ಥಳೀಯರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಇಲಾಖೆಯ ನಡೆ ಹಲವು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.