ಭಟ್ಕಳ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ಚಕ್ರದ ಸೈಕಲ್ ತುಳಿದು ಸುಮಾರು 4500ಕ್ಕಿಂತಲೂ ಅಧಿಕ ದೂರ ಪ್ರಯಾಣಿಸುವ ಸಾಹಸಕ್ಕೆ ಕೇರಳದ ಕಣ್ಣೂರಿನ ೨೩ರ ಹರೆಯದ ಸನೀದ್ ಕೈ ಹಾಕಿದ್ದಾರೆ.
ಇದನ್ನೂ ಓದಿ : ಪದೇಪದೇ ರಸ್ತೆ ಅಗೆತಕ್ಕೆ ಸಾರ್ವಜನಿಕರ ಆಕ್ರೋಶ
ಒಂದೇ ಚಕ್ರದ ಸೈಕಲ್ ನೊಂದಿಗೆ ಮೂರು ತಿಂಗಳ ಹಿಂದೆ ಕೇರಳದಿಂದ ಸನೀದ್ ಪ್ರಯಾಣ ಬೆಳೆಸಿದ್ದಾರೆ. ಗುರುವಾರ ಅವರು ಒಂದೇ ಚಕ್ರದ ಸೈಕಲ್ ತುಳಿಯುತ್ತ ಭಟ್ಕಳಕ್ಕೆ ಬಂದಿದ್ದು, ಅಲ್ಲಿಂದ ಮುಂದಕ್ಕೆ ಸಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಒಂದೇ ಚಕ್ರದಲ್ಲಿ ಸಂಚರಿಸಲು ನಿರಂತರವಾಗಿ ಪ್ರಯತ್ನಿಸಿದ್ದ ಸನೀದ್ ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಒಂದೇ ಚಕ್ರದ ಇರುವ ಸೈಕಲ್ ಮೂಲಕ ದೇಶ ಸುತ್ತುವ ಹಂತಕ್ಕೆ ಬಂದಿದ್ದಾರೆ.
ಈ ವಿಡಿಯೋ ನೋಡಿ : ಷೋಡಶ ಪವಿತ್ರ ನಾಗಮಂಡಲೋತ್ಸವ https://fb.watch/qZoH07Pkhz/?mibextid=Nif5oz
ಭಟ್ಕಳ ದಾಟಿರುವ ಸನೀದ್ ಸೇರಿ ಮೂವರಿದ್ದ ಯುವಕರ ತಂಡ, ಕೇರಳದ ಪ್ರತಿ ಜಿಲ್ಲೆಗೂ ತೆರಳಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.