ಭಟ್ಕಳ: ನಾಯಕತ್ವ ಗುಣ ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದು ಸಚಿವ ಮಂಕಾಳ ವೈದ್ಯ ಕರೆ ನೀಡಿದರು.
ತಾಲೂಕಿನ ಬೀನ ವೈದ್ಯ ಟ್ರಸ್ಟ್ ವತಿಯಿಂದ ಮುರ್ಡೇಶ್ವರದ ಬೀನ ವೈದ್ಯ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ಬಹುಮಾನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಓದಿ : ಚುನಾವಣಾ ಖರ್ಚಿಗೆ ಚುರುಮುರಿ ಮಾರಿ ಕೋಟಗೆ ₹25000 ಕೊಟ್ಟರು!
ಬಹುಮಾನ ವಿತರಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸಚಿವ ಮಂಕಾಳ ವೈದ್ಯ, ನಾಯಕತ್ವಗುಣಗಳನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದರು. ತಾವು ಬಾಲ್ಯದಲ್ಲಿ ಪಟ್ಟ ಕಷ್ಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಇವತ್ತಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಬಾಲ್ಯದಲ್ಲಿಯೇ ದೊರಕುತ್ತಿವೆ. ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಂಡು ಮುಂದೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬೇಕು ಎದು ಕರೆ ನೀಡಿದರು.
ಈ ವಿಡಿಯೋ ನೋಡಿ : ಷೋಡಶ ಪವಿತ್ರ ನಾಗಮಂಡಲೋತ್ಸವ https://fb.watch/q_4BwJGNGm/?mibextid=Nif5oz
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಂ. ವೈದ್ಯ ಮಾತನಾಡಿ, ಶಿಕ್ಷಣವು ನಮಗೆ ಪ್ರಬುದ್ಧತೆ ನೀಡುತ್ತದೆ. ಜೀವನಕ್ಕಾಗಿ ಶಿಕ್ಷಣದ ಉತ್ಕೃಷ್ಠತೆಗಾಗಿ ಪ್ರಯತ್ನ ಮಾಡಬೇಕು. ನಾವೆಲ್ಲರೂ ಆ ಧ್ಯೇಯವನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಿ ಆಗಮಿಸಿದ ಸಮಾಜ ಸೇವಕ ಎಸ್.ಎಸ್. ಕಾಮತ್ ಮತನಾಡಿದರು. ಬೀನಾ ವೈದ್ಯ ಪದವಿ ಕಾಲೇಜಿನ ಪ್ರಚಾರ್ಯ ಮಾಧವ ಪೂಜಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಯೀಮ್ ಗೋರಿ ವಂದಿಸಿದರು. ವಿದ್ಯಾರ್ಥಿಗಳಾದ ದಿವ್ಯ ನಾಯ್ಕ ಹಾಗೂ ಸಂದೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.