ಭಟ್ಕಳ: ಬಿಜೆಪಿ ಭಟ್ಕಳ ಮಂಡಲದ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಭಟ್ಕಳ ತಾಲೂಕು ಸಜ್ಜು
ಬಿಜೆಪಿ ಮಂಡಲ ಉಪಾಧ್ಯಕ್ಷರನ್ನಾಗಿ ಮಾಸ್ತಿ ಗೊಂಡ ಉತ್ತರಕೊಪ್ಪ, ಮಂಜಪ್ಪ ಮಾದೇವ ನಾಯ್ಕ ನರೇಕುಳಿ, ಶ್ರೀಪಾದ ಕಂಚುಗಾರ ಭಟ್ಕಳ ನಗರ, ಗಣಪತಿ ದೇವಡಿಗ ಉಳ್ಮಣ ಬೇಂಗ್ರೆ, ಪಾರ್ವತಿ ನಾಯ್ಕ ಹೆಬಳೆ, ಲಕ್ಷ್ಮೀ ನಾಯ್ಕ ಮುಂಡಳ್ಳಿ ಅವರನ್ನು ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳನ್ನಾಗಿ ಶ್ರೀನಿವಾಸ ನಾಯ್ಕ ಮೂಡಭಟ್ಕಳ, ಶ್ರೀಧರ ಜಟ್ಟ ನಾಯ್ಕ ಕೊಡ್ಸೂಳು ನೇಮಕವಾಗಿದ್ದಾರೆ. ಕಾರ್ಯದರ್ಶಿಯರನ್ನಾಗಿ ರಾಘವೇಂದ್ರ ಎಂ. ನಾಯ್ಕ ಗುಮ್ಮನಹಕ್ಕಲ, ಉದಯ ಉಮೇಶ ದೇವಡಿಗ ಕೋಟದಮಕ್ಕಿ, ಮಂಜುನಾಥ ಎನ್. ಮೊಗೇರ ಬೇಂಗ್ರೆ, ಜಗದೀಶ ಸೋಮಯ್ಯ ನಾಯ್ಕ ಬೆಣಂದೂರು, ಸಂತೋಷಿ ಖಾರ್ವಿ ಬಂದರ, ಶೀತಲ್ ಮುಕಂದ ನಾಯ್ಕ ಚೌತನಿ, ಪ್ರೇಮಾ ಶೇಟ್ ಸೋನಾರಕೇರಿ ಅವರನ್ನು ನೇಮಕ ಮಾಡಲಾಗಿದೆ.
ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಕಾಡಾನೆ ಪ್ರತ್ಯಕ್ಷ
ಮೋರ್ಚಾಗಳ ಅಧ್ಯಕ್ಷ-ಪ್ರ.ಕಾರ್ಯದರ್ಶಿಗಳು:
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಸುನೀಲ್ ಸುರೇಂದ್ರ ಕಾಮತ್ ಪ್ರಭಾತ್ ಸ್ಟ್ರೀಟ್, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಣಿಕಂಠ ಎಂ. ನಾಯ್ಕ ನೀರಕಂಠ, ಗಣೇಶ ನಾಯ್ಕ ಹೆರಾಡಿ ನೇಮಕಗೊಂಡಿದ್ದಾರೆ. ಹಿಂದುಳಿದ ಮೋರ್ಚಾ ಅಧ್ಯಕ್ಷರನ್ನಾಗಿ ಉಮೇಶ ನಾಗಪ್ಪ ನಾಯ್ಕ ಹೆರಾಡಿ, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಯಶೋಧರ ನಾಯ್ಕ ಚೌತನಿ, ವಿನಾಯಕ ಮಂಜುನಾಥ ಆಚಾರ್ಯ ಹನುಮಾನ ನಗರ ನೇಮಕವಾಗಿದ್ದಾರೆ. ಮಹಿಳಾ ಮೋರ್ಚಾ ಅಧ್ಯಕ್ಷರನ್ನಾಗಿ ಸುನೀತಾ ಡಿ. ಹೇರೂರ್ಕರ್ ಚಿತ್ರಾಪುರ, ಪ್ರಧಾನ ಕಾರ್ಯದರ್ಶಿಗಳಾಗಿ ಕುಪ್ಪು ಮಂಗಳಾ ಗೊಂಡ ಹೆಬಳೆ, ವಿಜಯಾ ಸುಬ್ರಾಯ ನಾಯ್ಕ ಬಸ್ತಿ ಕಾಯ್ಕಿಣಿ ಅವರನ್ನು ನೇಮಿಸಲಾಗಿದೆ.
ಎಸ್. ಟಿ. ಮೋರ್ಚಾ ಅಧ್ಯಕ್ಷರಾಗಿ ಮಾದೇವ ನಾಗಯ್ಯ ಗೊಂಡ ಹೆಬಳೆ, ಪ್ರಧಾನ ಕಾರ್ಯದರ್ಶಿಗಳಾಗಿ ರಾಮ ಮಾದೇವ ಗೊಂಡ ಕಟಗಾರಕೊಪ್ಪ, ರಾಮಯ್ಯ ಸಣ್ಣು ಗೊಂಡ ಕುಂಟವಾಣಿ ನೇಮಕವಾಗಿದ್ದಾರೆ. ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನಾರಾಯಣ ಆರ್. ಭಟ್ಟ ಮಾರುಕೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ರುಕ್ಮಾ ಸೋಮ ಮರಾಠಿ, ಮಂಜುನಾಥ ಜಟ್ಟ ನಾಯ್ಕ ಮೂಡಶಿರಾಲಿ ನೇಮಕಗೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಸಂಚಾಲಕರನ್ನಾಗಿ ಪಾಂಡುರಂಗ ನಾಯ್ಕ ಆಸರಕೇರಿ ಇವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ತಿಳಿಸಿದ್ದಾರೆ.