ಭಟ್ಕಳ: ಕ್ಲಾರ್ಕ್ ಬಾಯಿ ಎಂದೇ ಚಿರಪರಿಚಿತರಾಗಿದ್ದ ನಗರದ ಬಂದರ ರಸ್ತೆ ೨ನೇ ಕ್ರಾಸ್ ನಿವಾಸಿ ವಿಕ್ಟೋರಿಯಾ ಲೂಯಿಸ ಗೊನ್ಸಾಲ್ವೀಸ್ (೮೩) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನಲ್ಲಿ ಮಾ.೨೩ರಂದು ನಿಧನರಾದರು.

ಇದನ್ನೂ ಓದಿ : ರೀಲ್ಸ್ ಹುಚ್ಚಾಟಕ್ಕೆ ಶಾಲೆಯ ಪೀಠೋಪಕರಣ ಪೀಸ್ ಪೀಸ್
ಮೃತರು ಇಲ್ಲಿನ ನ್ಯೂ ಇಂಗ್ಲೀಷ್ ಪ್ರೌಢ ಶಾಲೆಯಲ್ಲಿ ಗುಮಾಸ್ತೆಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ತಮ್ಮ ನಿವೃತ್ತಿ ಜೀವನವನ್ನು ಭಟ್ಕಳದಲ್ಲಿ ನಡೆಸುತ್ತಿದ್ದ ಇವರು ಅವಿವಾಹಿತರಾಗಿದ್ದರು. ಕಳೆದ ೫-೬ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೃತರು ತಮ್ಮ ವೃತ್ತಿ ಕೌಶಲ್ಯದಿಂದ ಹಾಗೂ ವಿದ್ಯಾರ್ಥಿಗಳ ಮೇಲೆ ತೋರಿದ ಪ್ರೀತಿಯಿಂದ ಕ್ಲಾರ್ಕ ಬಾಯಿ ಎಂದೇ ಕರೆಯಿಸಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಹಾಗೂ ಶಿಸ್ತಿನಿ ಗುಮಾಸ್ತೆಯಾಗಿದ್ದರು. ಮೃತರು ಇತ್ತೀಚೆಗಷ್ಟೇ ನಿಧನರಾದ ಪೀಟರ್ ಗೋನ್ಸಾಲ್ವೀಸ್ ಅವರ ಸಹೋದರಿ.

ಈ ರೀಲ್ಸ್ ನೋಡಿ : ಹ್ಯಾಟ್ರಿಕ್ ಹೀರೊ ಶಿವಣ್ಣ ಡೈಲಾಗ್ ಪಂಚ್