ಕುಂದಾಪುರ : ಇಲ್ಲಿನ ಸಂತೆಕಟ್ಟೆಯ ಶಿವಳ್ಳಿ ಗ್ರಾಮದ ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚಧೂಮಾವತಿ ಗಡುವಾಡು ದೈವಸ್ಥಾನದ ನವೀಕೃತ ತಾಮ್ರಮಯ ಆಲಯ ಸಮರ್ಪಣೆ ನಡೆಯಲಿದೆ. ಆ ಪ್ರಯುಕ್ತ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ವಾರ್ಷಿಕ ನೇಮೋತ್ಸವ ಮಹಾ ಚಂಡಿಕಾಯಾಗ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವು ಇಂದಿನಿಂದ(ಮಾ.೨೫) ಮಾ.೩೦ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಇದನ್ನೂ ಓದಿ : ರೀಲ್ಸ್ ಹುಚ್ಚಾಟಕ್ಕೆ ಶಾಲೆಯ ಪೀಠೋಪಕರಣ ಪೀಸ್ ಪೀಸ್

ಇಂದು ಸಂಜೆ 4.30ಕ್ಕೆ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಯು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ಬಬ್ಬುಸ್ಥಾನ, ಗರಡಿ, ಕೊರಗಜ್ಜ ಮಾರ್ಗವಾಗಿ ಚಿಕ್ಕಮ್ಮ ದೇವಸ್ಥಾನ, ಕುದ್ರುಚಾವಡಿ, ಬೊಮ್ಮರ್ಯ ಮಾರ್ಗವಾಗಿ ನಯಂಪಳ್ಳಿ, ಎಲ್‌.ವಿ.ಟಿ ದೇವಸ್ಥಾನ, ಅಂಬಾಗಿಲು, ವ್ಯಾಯಾಮ ಶಾಲೆ ಮಾರ್ಗವಾಗಿ ಮಣಿಪಾಲ ರಸ್ತೆ, ಶ್ಯಾಂ ಸರ್ಕಲ್‌ನಿಂದ ಕಟ್ಟೆ ಸಾನಿಧ್ಯಕ್ಕೆ ತಲುಪಲಿದೆ.
ಮಾ.೨೬ರಂದು ಸಂಜೆ ೬ ರಿಂದ ಗುಡಿ ಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ,ವಾಸ್ತು ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ, ದ್ವಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಈ ರೀಲ್ಸ್ ನೋಡಿ : ಹ್ಯಾಟ್ರಿಕ್ ಹೀರೊ ಶಿವಣ್ಣ ಡೈಲಾಗ್ ಪಂಚ್

ಮಾ.೨೭ರಂದು ಬೆಳಿಗ್ಗೆ ೮ರಿಂದ ಆದ್ಯಗಣಯಾಗ, ಪ್ರಾಯಶ್ಚಿತ ಹೋಮಾದಿಗಳು, ಪೂರ್ವಾಹ್ನ ೧೧.೩೫ಕ್ಕೆ ಸರಿಯಾಗಿ ಮಿಥುನ ಲಗ್ನದಲ್ಲಿ ಶ್ರೀ ದೇವಿಯ ಪುನಃ ಪ್ರತಿಷ್ಠೆ, ಧೂಮಾವತಿಯ ಪ್ರತಿಷ್ಠೆ, ಪಂಚಾಮೃತ ಕಲಶಾಭಿಷೇಕ ನಡೆಯಲಿದೆ. ಸಂಜೆ ೬ರಿಂದ ಸುದರ್ಶನ ಹೋಮ, ದಿಶಾ ಹೋಮ,‌ ಮಂಟಪ ನಮಸ್ಕಾರ ನಡೆಯಲಿದೆ.

ಮಾ.೨೮ರಂದು ಬೆಳಿಗ್ಗೆ ೮ರಿಂದ ಗಣಯಾಗ, ದುರ್ಗಾ ಹೋಮ, ೧೧.೩೦ ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾದೇವಿ ಅಮ್ಮನವರಿಗೆ ಶತ ಅಷ್ಟೋತ್ತರ (೧೦೮) ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪಂಚ ಧೂಮಾವತಿಗೆ ಪಂಚವಿಂಶತಿ (೨೫) ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ ೧೨ ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೧೨.೩೦ ಕ್ಕೆ ‘ಹೆಬ್ರಿಯ ಇಂಚರ ಮೆಲೊಡೀಸ್ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮವಿದೆ. ಸಾಯಂಕಾಲ ೬ ಕ್ಕೆ ದೀಪಾರಾಧನೆ, ರಂಗಪೂಜೆ, ತಂದೆ ನಂತರ ಶ್ರೀ ಅಮ್ಮನವರ ಮತ್ತು ಧೂಮಾವತಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.

ಮಾ.೨೯ರಂದು ಸಂಜೆ ೬.೩೦ಕ್ಕೆ ಪ್ರಸನ್ನ ಪೂಜೆ, ಅಂಬಲಪಾಡಿಯ ಶ್ರೀ ಗುರು ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ಇದೆ. ರಾತ್ರಿ ೮ರಿಂದ ವಿಜಯ ಎನ್ ಸುವರ್ಣ ಸಾಂಸ್ಕೃತಿಕ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೮.೩೦ ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ಸಂಗೀತ ಗಾನ ಸಂಭ್ರಮ ನಡೆಯಲಿದೆ.

ಮಾ.೩೦ರಂದು ಬೆಳಿಗ್ಗೆ ೯.೩೦ಕ್ಕೆ ಮಹಾ ಚಂಡಿಕಾಯಾಗ, ಮಧ್ಯಾಹ್ನ ೧೨.೩೦ಕ್ಕೆ ಮಹಾ ಪೂಜೆ, ಚಂಡಿಕಾ ಯಾಗದ ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ, ‌ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಹಾಗೂ ರಾತ್ರಿ ೯.೩೦ರಿಂದ ಪಂಚ ಧೂಮಾವತಿ ಕೋಲ ಸೇವೆ ಜರುಗಲಿರುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.