ರಿಪ್ಪನಪೇಟೆ : ರಾಜ್ಯದೆಲ್ಲೆಡೆ ಬರ ತಾಂಡವವಾಡುತ್ತಿದೆ. ಜಿಲ್ಲೆಯಲ್ಲೂ ಮಳೆ ಕೊರತೆ ಎದ್ದು ಕಾಣುತ್ತಿದೆ. ಬರದಿಂದಾಗಿ ನೀರಿನ ಅಭಾವವಿದ್ದು, ಪ್ರಾಣಿ, ಪಕ್ಷಿಗಳಿಗೂ ನೀರಿನ ಅಭಾವವುಂಟಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ನೀರಿನ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆಯನ್ನು ಮನಗಂಡ ಇಲ್ಲೊಬ್ಬ ರೈತ ಪ್ರಾಣಿ-ಪಕ್ಷಿಗಳಿಗೆ ಸಹಕಾರಿಯಾಗಿದ್ದಾನೆ.

ಇದನ್ನೂ ಓದಿ : ಗೃಹ ಸಚಿವರ ಆಪ್ತ ಕಾರ್ಯದರ್ಶಿ, ಸಿದ್ದಾಪುರದ ಚನ್ನಬಸಪ್ಪಗೆ ಪಿ.ಎಚ್‌ಡಿ ಗೌರವ

ರಾಜ್ಯದೆಲ್ಲೆಡೆಯಂತೆ, ಶಿವಮೊಗ್ಗದಲ್ಲಿಯೂ ಕೂಡ ಮಳೆ ಕೊರತೆಯಿಂದ ನೀರಿನ ಹಾಹಾಕಾರ ಶುರುವಾಗಿದೆ. ಮನುಷ್ಯನ ಮೂಲಭೂತ ಸೌಲಭ್ಯದಲ್ಲಿ ನೀರು ಅತೀ ಪ್ರಮುಖವಾದುದ್ದು, ಪ್ರತಿನಿತ್ಯದ ಕೆಲಸ ಕಾರ್ಯಗಳಿಂದ ಹಿಡಿದು, ಕೃಷಿ ಕೆಲಸಗಳಿಗೆ ನೀರು ಅತಿ ಅವಶ್ಯಕ. ಈ ವರ್ಷ ನೀರಿನ ಹಾಹಾಕಾರ ಹೇಗಿದೆ ಅಂದ್ರೆ ಕೃಷಿ ಕೆಲಸಕ್ಕಿರಲಿ ಕುಡಿಯಲು ಸಹ ನೀರಿನ ಬವಣೆ ಹೇಳ ತೀರದಾಗಿದೆ. ಅದೆಷ್ಟೋ ಜನರ ಮನೇಲಿ ಕೊಳವೆ ಬಾವಿ ಕೊರೆಸಿ, ಒಳ್ಳೆಯ ನೀರು ಬಂದಿರುತ್ತೆ, ಅವರ ನಿತ್ಯದ ಕೆಲಸಕ್ಕೆ ಕೃಷಿ ಕೆಲಸಕ್ಕೆ ಬಳಸಿಯೂ ಕೂಡ ನೀರು ಇರುತ್ತೆ. ಇಂತಹವರು ಕೂಡ ಕೆಲವರಿಗೆ ಕುಡಿಯಲು ನೀರು ಇರುವುದಿಲ್ಲ. ಅಂತಹವರು ಕುಡಿಯಲು ಕೇಳಿದರು ನೀರು ಇಲ್ಲ ಅನ್ನುವ ಸನ್ನಿವೇಶ ಶುರುವಾಗಿದೆ.

ಈ ರೀಲ್ಸ್ ನೋಡಿ : ಭಟ್ಕಳ ಬಂದರಿನಲ್ಲಿ ಹೋಳಿ ಸಂಭ್ರಮ

ಇಂತಹ ಸನ್ನಿವೇಶದಲ್ಲಿ ಹೊಸನಗರ ತಾಲ್ಲೂಕು ಚಿಕ್ಕಜೇನಿ ಗ್ರಾ.ಪಂ. ಹೊಸಳ್ಳಿ ಗ್ರಾಮದ ಜಾಗದ್ದೆ ಚಂದ್ರಶೇಖರ್ ಎಂಬ ರೈತ ಮಾನವೀಯತೆ ಮೆರೆದಿದ್ದಾರೆ. ಪ್ರಾಣಿಗಳು ಮತ್ತು ಪಕ್ಷಿಗಳು ನೀರಿಗಾಗಿ ಪರೀತಪಿಸುವುದನ್ನು ಕಂಡ ರೈತ ಜಾಗದ್ದೆ ಚಂದ್ರಶೇಖರ್ ಎಂಬುವವರು, ತನ್ನ ಸ್ವಂತ ಹಣದಿಂದ ಜಾನುವಾರು ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮನೆಯ ಸಮೀಪ ಕಾಡಿನಲ್ಲಿ ಒಂದು ಟ್ಯಾಂಕ್ ನಿರ್ಮಿಸಿ ತಮ್ಮ ಬೋರ್ವೆಲ್ ನಿಂದ ನೀರು ತುಂಬಿಸುತ್ತಿದ್ದಾರೆ.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?

ಈ ರೈತನ ಪ್ರಾಣಿ ಪ್ರೀತಿ ಕಂಡ ಗ್ರಾಮಸ್ಥರು ಶಹಬ್ಬಾಷ್ ಎಂದಿದ್ದಾರೆ. ಕುಡಿಯಲು ನೀರು ಕೇಳಿದರೆ, ಕೊಡಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿಯಲ್ಲಿ, ಈ ರೈತ, ಪ್ರಾಣಿಗಳಿಗೆ ನೀರುಣಿಸುವ ಪರಿ ಕಂಡು ಹುಬ್ಬೇರಿಸಿದ್ದಾರೆ. ಅದು ಕೂಡ, ತೋಟಕ್ಕೆ ಹಾಯಿಸಲು ಬೋರ್ವೆಲ್ ನಲ್ಲಿ ನೀರು ಇಲ್ಲದ ಪರಿಸ್ಥಿತಿಯಲ್ಲಿಯೂ ಮಾನವೀಯತೆ ಮೆರೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಒಟ್ಟಾರೆ, ರೈತನ ಶ್ರಮ ಮತ್ತು ಆಸಕ್ತಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. ಬೇಸಿಗೆಯ ಬಿಸಿಲಿನಿಂದ ಬಸವಳಿದಿದ್ದ ಪ್ರಾಣಿಗಳು ಕೂಡ, ಈ ರೀತಿ ಕುಡಿಯಲು ಯಥೇಚ್ಛ ನೀರು ಕಂಡು, ಮನಸ್ಸಿನಲ್ಲೇ ಸಂತಸದಿಂದ ರೈತನಿಗೆ ಧನ್ಯವಾದ ಹೇಳುತ್ತಿರಬಹುದೇನೋ!