ಭಟ್ಕಳ : ಕಾಂಗ್ರೆಸ್ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ನಾವು ಮತ ಕೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇದನ್ನೂ ಓದಿ : ಧರ್ಮ ಯುದ್ಧ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ: ಡಿ.ಕೆ. ಶಿವಕುಮಾರ್

ಇಲ್ಲಿನ ಅರ್ಬನ್ ಬ್ಯಾಂಕಿನ ಎ.ಕೆ.ಹಾಪಿಝ್ಕಾ ಹಾಲ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು(ಮಾ.೨೬) ಹಮ್ಮಿಕೊಂಡ ಕೆನರಾ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?

15 ಲಕ್ಷ 92 ಸಾವಿರ ಮತಗಳು ಕೆನರಾ ಲೋಕಸಭಾ ಕ್ಷೇತ್ರದಲ್ಲಿವೆ. 20 ವರ್ಷಗಳ ಕಾಲ ನಮ್ಮ ಪಕ್ಷವನ್ನು ಈ ಕ್ಷೇತ್ರದಲ್ಲಿ ಕಳೆದುಕೊಂಡಿದ್ದೇವೆ. ಖಾನಾಪುರದಲ್ಲಿ ಕಾಂಗ್ರೆಸ್ಸಿನಿಂದ ಗೆದ್ದಿದ್ದು ಡಾ. ಅಂಜಲಿ ಅವರೇ ಮೊದಲಿಗರು. ಮಹಿಳೆಯರಿಗೆ 60 ಬೆಡ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಖಾನಾಪುರದಲ್ಲಿ ಆರಂಭಿಸಿದ್ದು ಡಾ.ಅಂಜಲಿ ಅವರ ಸಾಧನೆ ಇದೆ. ನನಗೆ ಒಂದು ಲಕ್ಷ ಮತ ನೀಡಿದ್ದೀರಿ. ಅದರಂತೆ ಈ ಬಾರಿ ಲೋಕಸಭೆಗೂ ಅತ್ಯಧಿಕ‌ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಗ್ಯಾರೆಂಟಿ ಕಾರ್ಡ ತೋರಿಸಿ ಲಕ್ಷ ಮತ ನೀಡಿದ್ದಾರೆ. ಈಗ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಗ್ಯಾರೆಂಟಿ ಯೋಜನೆ ಹಣಗಳು ಜನರ ಮನೆಗೆ ತಲುಪಿಸಿದ್ದೇವೆ. ಇದು ನಮ್ಮ ಸಾಧನೆ. ನನಗೆ ನನ್ನ ಕ್ಷೇತ್ರದ ಜನರ ಮೇಲೆ ನಂಬಿಕೆ ಇದೆ ಎಂದರು.

ರೀಲ್ಸ್ ನೋಡಿ : ಮುರುಡೇಶ್ವರ ತೀರದಲ್ಲಿ ಮಂತ್ರಾಲಯ ಶ್ರೀ ವಿಹಾರ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಚುನಾವಣೆಯ ತಯಾರಿಗೆ ಯಾವೆಲ್ಲ ರೀತಿ ಸಿದ್ದರಾಗಬೇಕು ಎಂಬ ಮಾರ್ಗದರ್ಶನ ನಮ್ಮ ಉಸ್ತುವಾರಿ ಸಚಿವರಿಂದ ಹಾಗೂ ಹಿರಿಯರಿಂದ ಸಿಗಲಿದೆ. ನಮ್ಮ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿ‌ದ್ದಾರೆ. ಜನಪರ ಚಿಂತನೆಯುಳ್ಳವರಾಗಿದ್ದಾರೆ. ಖಾನಾಪುರದ ಮೂಲದವರಾದ ಡಾ.ಅಂಜಲಿ ನಿಂಬಾಳ್ಕರ್ ನಮ್ಮ ಕೆನರಾ ಕ್ಷೇತ್ರದವರಾಗಿದ್ದು ನಮ್ಮ ಸೌಭಾಗ್ಯ. 5 ವರ್ಷ ಖಾನಾಪುರ ಕ್ಷೇತ್ರದ ಶಾಸಕಿಯಾಗಿ ಕೆಲಸ ಮಾಡಿರುವ ಅನುಭವ ಇದೆ. ಜಾತ್ಯಾತೀತ ಮತ್ತು ಸಂವಿಧಾನವನ್ನು ದೇಶಕ್ಕೆ ನೀಡಿದ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ. ಅಂಜಲಿ ಅವರು ನಿಮ್ಮೆಲ್ಲರ ಬಳಿ ಬರಲಿದ್ದಾರೆ ಅವರಿಗೆ ಮತ ಹಾಕಿ ನಮ್ಮ ಸಂಸದರನ್ನಾಗಿಸಬೇಕಿದೆ ಎಂದರು.


ಕೆ‌.ಪಿ.ಸಿ.ಸಿ. ಶಿಸ್ತು ಸಮಿತಿ ಸಂಚಾಲಕ ನಿವೇದಿತ್ ಆಳ್ವಾ ಮಾತನಾಡಿ ‘ದೇಶದಲ್ಲಿ ಸದ್ಯ 10 ವರ್ಷದಿಂದ ನಡೆಯುತ್ತಿರುವ ವಿಚಾರಗಳನ್ನು ಗಮನಿಸಿ. ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೀಡಿದ ಆಶ್ವಾಸನೆಗಳೆಲ್ಲವೂ 10 ವರ್ಷ ಆದರೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಂಜಲಿ ಅವರಿಗೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸದ ಬಗ್ಗೆ ಅರಿವಿದೆ. ಈ ಬಾರಿ 30 ದಿನ ಪ್ರಚಾರಕ್ಕೆ ಅವಕಾಶವನ್ನು ಪಕ್ಷ ನೀಡಿದೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ. ಬಿಜೆಪಿಯಲ್ಲಿ ಮಾತು ಜಾಸ್ತಿ ಆಡಿದವರಿಗೆ ಈ ಬಾರಿ ಟಿಕೆಟ್ ನೀಡದೇ ಕೆಳಗಿಸಿದ್ದಾರೆ ಎಂದರು.


ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಮಾತನಾಡಿ, ‘ ನಿಮ್ಮ ಧ್ವನಿಗೆ ನಾನು ಕೆಲಸ ಮಾಡಲು ಸಿದ್ದರಿದ್ದೇನೆ. ಸಂವಿಧಾನವನ್ನು ದೇಶ ಕೊಟ್ಟು ಜನರು ಸುಭದ್ರವಾಗಿರುವಂತೆ ಕಾಂಗ್ರೆಸ್ ಪಕ್ಷ ಮಾಡಿದೆ. ಬಿಜೆಪಿ ಸರಕಾರ ಎಲ್ಲಾ ಸುಳ್ಳು ಭರವಸೆಯಲ್ಲಿಯೇ ಕಾಲ ಕಳೆದಿದೆ. 10 ವರ್ಷದಲ್ಲಿ ಯಾವುದೇ ಭರವಸೆ ಜಾರಿಗೆ ಬಂದಿಲ್ಲ ಎಂದರು.


ಮನ ಕೀ ಬಾತ್ ನಲ್ಲಿ ಮನೆಯಲ್ಲಿ ಎ.ಸಿ. ರೂಮ್ ನಲ್ಲಿ ಕುಳಿತು ಜನರನ್ನು ಮೋಸ ಮಾಡುತ್ತಿದ್ದ ಬಿಜೆಪಿ ಅವರ ವಿರುದ್ದ ಈ ಬಾರಿ ಚುನಾವಣಾ ಎದುರಿಸಬೇಕಿದೆ. ಜನರಿಗೆ ಅನ್ಯಾಯವೆಸಗಿದ ಮೋಸದ ಜನರ ವಿರುದ್ದ ದೇಶವನ್ನು ರಕ್ಷಿಸುವ ನ್ಯಾಯ ಕೊಡಿಸುವವರ ಕಾಂಗ್ರೆಸ್ ಪಕ್ಷದ ಚುನಾವಣೆ ಆಗಿದೆ. ಬೂತ್ ಮಟ್ಟದಲ್ಲಿ ನಮ್ಮ ಸರ್ಕಾರ ತಂದಿರುವ 5 ಗ್ಯಾರಂಟಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರೆ ಸಾಕು ನಾವು ಸುಲಭವಾಗಿ ಗೆಲ್ಲುತ್ತೇವೆ ಎಂಬ ಭರವಸೆ ನಮಗೆ ಇದೆ ಎಂದರು.


ಕಳೆದ 10 ವರ್ಷದಿಂದ ಬಿಜೆಪಿ ಸರ್ಕಾರ ಜೀರೋ ಬ್ಯಾಲೆನ್ಸ್ ಖಾತೆ ಮಾಡಿ ಪ್ರತಿ ಒಬ್ಬರಿಗೆ 15 ಸಾವಿರ ಖಾತೆಗೆ ಜಮಾ ಮಾಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಈ ರೀತಿ ಸುಳ್ಳು ಭರವಸೆ ಯಾರಿಗೂ ನೀಡಿಲ್ಲ. ಮುಂದೆ ಸಹ ನೀಡುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರ ಬಂದ ಮೇಲೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಯಾರಿಗೂ ಉದ್ಯೋಗ ದೊರೆತಿಲ್ಲ ಎಂದು ಡಾ. ಅಂಜಲಿ ನಿಂಬಾಳ್ಕರ ಹೇಳಿದರು.

ಇದನ್ನೂ ಓದಿ : ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ವಸ್ತು ಸಾಗಾಟ ಮುನ್ನ ಎಚ್ಚರ !
ವೇದಿಕೆಯಲ್ಲಿ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೋಗೇರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತಾ, ಹಿರಿಯ ಮುಖಂಡ ವೆಂಕಟಯ್ಯ ಬೈರುಮನೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ
ಆರ್.ಎಚ್. ನಾಯ್ಕ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.