ಭಟ್ಕಳ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ ತಂಡ) ಭಟ್ಕಳಕ್ಕೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಖಾಸಗಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಗಂಭೀರ

ಮೂರು ಜನ ಅಧಿಕಾರಿಗಳು ಇರುವ ತಂಡವು ತಲೆಮರೆಸಿಕೊಂಡಿರುವ ಶಂಕಿತ ಉಗ್ರ, ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಇಕ್ಬಾಲ್ ಭಟ್ಕಳ್ ಮನೆಗೆ ಭೇಟಿ ನೀಡಿದೆ. ಭಟ್ಕಳದ ತಕಿಯಾ ಸ್ಟ್ರೀಟ್ ನಲ್ಲಿರುವ  ಇಕ್ಬಾಲ್ ಭಟ್ಕಳ ಮನೆಗೆ ಭೇಟಿ ನೀಡಿದೆ. ಇಕ್ಬಾಲ್ ಭಟ್ಕಳ್ ಮಗನನ್ನು ವಿಚಾರಿಸಿದ ಎನ್ಐಎ ಅಧಿಕಾರಿಗಳು ವಿಚಾರಣೆ ಸಂಬಂಧ ಬೆಂಗಳೂರಿಗೆ ಬರುವಂತೆ ನೋಟಿಸ್ ನೀಡಿ ತೆರಳಿದೆ.

ಈ ವಿಡಿಯೋ ಕೂಡ ನೋಡಿ : ಬಸ್ ಡಿಕ್ಕಿ, ಆಟೋ ಚಾಲಕ‌ಗಂಭೀರ

ಬಾಂಬ್ ಸ್ಫೋಟ ನಂತರ ಬೆಂಗಳೂರಿನ ಸುಜಾತ ಸರ್ಕಲ್‌ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದ. ನಂತರ ತುಮಕೂರಿನಿಂದ ಬಳ್ಳಾರಿಗೆ ಬಸ್‌ನಲ್ಲಿ ಬಂದು ತದ ನಂತರ ಮಂತ್ರಾಲಯ- ಗೋಕರ್ಣ ಬಸ್‌ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ತಂಡ ಭಟ್ಕಳಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?