ಶಿವಮೊಗ್ಗ : ಮಾ. ೨೮ರ ರಾತ್ರಿ ಸಾಗರ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ದಾಖಲೆಯಿಲ್ಲದ ಲಕ್ಷಾಂತರ ರೂ. ನಗದು ವಶಕ್ಕೆ

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಮಾ.೨೮ರಂದು ರಂದು ರಾತ್ರಿ ೯.೪೫ ಕ್ಕೆ ಸಾಗರ ತಾಲೂಕಿನ ಕಾನಲೆ ಕ್ರಾಸ್ ಬಳಿ ಅಬಕಾರಿ ಅಧಿಕಾರಿಗಳು ರಸ್ತೆಗಾವಲು ನಡೆಸುತ್ತಿದ್ದರು. ಆಗ ತಾಳಗುಪ್ಪ ಕಡೆಯಿಂದ ಸಾಗರ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ತಪಾಸಣೆ ನಡೆಸುವ ಸಲುವಾಗಿ ನಿಲ್ಲಿಸಲು ಸೂಚಿಸಿದರು.‌ ಆಗ ವಾಹನವನ್ನು ನಿಲ್ಲಿಸದೇ ತಿರುಗಿಸುವ ಭರದಲ್ಲಿ ವಾಹನವು ಬಂದ್ ಆಗಿದೆ. ತಕ್ಷಣ ಚಾಲನೆ ಮಾಡುತ್ತಿದ್ದ ವ್ಯಕ್ತಿ ವಾಹನದಿಂದ ಇಳಿದು ಓಡಲಾರಂಭಿಸಿದ್ದಾನೆ. ಆತನನ್ನು ಹಿಡಿಯಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಯತ್ನಿಸಿದರು. ಆದರೆ ಕೈಗೆ ಸಿಗದೇ ಕತ್ತಲೆಯಲ್ಲಿ ಓಡಿ ಮರೆಯಾಗಿದ್ದಾನೆ.

ಇದನ್ನೂ ಓದಿ : ಕೆಎಸ್ಸಾರ್ಟಿಸಿ ಚಾಲಕರು ಡಬಲ್ ಡ್ಯೂಟಿ ಮಾಡುವಂತಿಲ್ಲ

ನಂತರ ಬಿಳಿ ಬಣ್ಣದ ಟಾಟಾ ಏಸ್ ನಾಲ್ಕು ಚಕ್ರದ ನೋಂದಣಿ ಸಂಖ್ಯೆ ಕೆಎ-೧೫ ೯೯೪೦ ವಾಹನವನ್ನು ತಪಾಸಣೆ ನಡೆಸಲಾಯಿತು. ತಾಳಗುಪ್ಪದ ಎಫ್‍ಎಸ್‍ಟಿ -೪ಸಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ವಾಹನವನ್ನು ತಪಾಸಣೆ ನಡೆಸಲಾಯಿತು. ಚಾಲಕನ ಸೀಟಿನ ಪಕ್ಕದ ಸೀಟಿನ ಮೇಲೆ ಮತ್ತು ಕೆಳಗೆ ೨ ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ೯೦ ಮಿ.ಲೀ. ಒರಿಜಿನಲ್ ಚಾಯ್ಸ್ ವಿಸ್ಕಿ ಹೆಸರಿನ ಮದ್ಯ ತುಂಬಿದ ೨೮೮ ಟೆಟ್ರಾ ಪ್ಯಾಕ್ ಇದ್ದವು. ಎರಡನೇ ಚೀಲದಲ್ಲಿ ೯೦ ಮಿ.ಲೀ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ ಹೆಸರಿನ ೨೮೮ ಮದ್ಯ ತುಂಬಿದ ಟೆಟ್ರಾ ಪ್ಯಾಕ್‍ಗಳಿದ್ದವು.

ಅಂದಾಜು ರೂ. ೨,೨೩,೦೪೬ ರೂ. ಮೌಲ್ಯದ ಪರವಾನಗಿ ಇಲ್ಲದ ಒಟ್ಟು ೫೧.೮೪ ಲೀಟರ್ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಚಾಲಕ ನಾಪತ್ತೆಯಾಗಿದ್ದು, ವಾಹನ ಮಾಲೀಕನ‌ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.