ಭಟ್ಕಳ : ಹಿಂದೂ ಕಾರ್ಯಕರ್ತ, ಹನುಮಾನ ನಗರದ ಶ್ರೀನಿವಾಸ ಮಾಸ್ತಪ್ಪ ನಾಯ್ಕ ವಿರುದ್ಧ ಗಡಿಪಾರು ಕೇಸ್ ದಾಖಲಿಸಿದ್ದನ್ನು ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ತೀವ್ರವಾಗಿ ಖಂಡಿಸಿದೆ.

ಇದನ್ನೂ ಓದಿಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಗಡಿಪಾರಿಗೆ ನೋಟಿಸ್ ಜಾರಿ

ಈ ಕುರಿತು ಪ್ರಕಟಣೆ ನೀಡಿರುವ ಬಿಜೆಪಿ ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ,
ಕಾಂಗ್ರೆಸ್ ಸರ್ಕಾರದ ಈ ರೀತಿಯ ಪ್ರವೃತ್ತಿ ಹಿಂದೂ ಕಾರ್ಯಕರ್ತರನ್ನು ದಮನಿಸುವ ಉದ್ದೇಶ ಹೊರತು ಬೇರೆ ಉದ್ದೇಶವಿಲ್ಲ ಎಂದಿದ್ದಾರೆ.

ಇದನ್ನೂ ಓದಿಗಡಿಪಾರು ಯತ್ನ; ಓಲೈಕೆ ರಾಜಕಾರಣದ ಮುಂದುವರಿದ ಭಾಗ

ಶ್ರೀನಿವಾಸ ನಾಯ್ಕ ಸಂಘದ ಗರಡಿಯಲ್ಲಿ ಪಳಗಿದ ಕಾರ್ಯಕರ್ತ. ಅವರ ಮೇಲಿರುವ ಕೆಲವೊಂದು ಮೊಕದ್ದಮೆಗಳು ಹಿಂದೂ ಸಮಾಜಕ್ಕಾದ ಅನ್ಯಾಯವನ್ನು ಪ್ರತಿಬಿಂಬಿಸುವ ವೇಳೆ ದಾಖಲಾದ ಪ್ರಕರಣಗಳು. ಇದರಲ್ಲಿ ಸಾಮಾಜಿಕ ಕಳಕಳಿ ಇದೆಯೇ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ. ಅವರ ಮೇಲೆ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಮುಂತಾದ ಕ್ರೀಮಿನಲ್ ಚಟುವಟಿಕೆ ಒಳಗೊಂಡ ಯಾವುದೇ ಪ್ರಕರಣವಿಲ್ಲ ಎಂದು ಲಕ್ಷ್ಮೀನಾರಾಯಣ ನಾಯ್ಕ ತಿಳಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕೇವಲ ಹಿಂದೂ ಕಾರ್ಯಕರ್ತರನ್ನು ದಮನಿಸುವ ಉದ್ದೇಶದಿಂದ ದಾಖಲಿಸುವ ಇಂತಹ ಪ್ರಕರಣಗಳನ್ನು ಸರ್ಕಾರ ಬಿಡಬೇಕು. ಈ ಕೂಡಲೇ ಸರ್ಕಾರ ಶ್ರೀನಿವಾಸ ನಾಯ್ಕರ ಮೇಲಿನ ಗಡಿಪಾರು ಕೇಸ್ ಹಿಂತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ಈ ಬಗ್ಗೆ ತೀವ್ರತರವಾದ ಹೋರಾಟವನ್ನು ಹಿಂದೂ ಸಮಾಜದ ಜೊತೆಗೂಡಿ ಮಾಡಬೇಕಾಗುತ್ತದೆ ಎಂದು ಲಕ್ಷ್ಮೀನಾರಾಯಣ ನಾಯ್ಕ ಎಚ್ಚರಿಸಿದ್ದಾರೆ.