ಉಡುಪಿ : ಇಲ್ಲಿನ ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬಾ ಮಂದಿರಕ್ಕೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿದರು.
ಇದನ್ನೂ ಓದಿ : ಶ್ರೀ ನಾಗಬನ ದೇವಸ್ಥಾನದ ವರ್ಧಂತಿ ಮಹೋತ್ಸವ ಏ.೪ರಂದು
ಶ್ರೀ ಕ್ಷೇತ್ರ ಶಂಕರಪುರದ ದ್ವಾರಕಾಮಾಯಿ ಸಾಯಿಬಾಬಾ ಮಂದಿರ, ಶ್ರೀ ಮುಖ್ಯಪ್ರಾಣ ದೇವರ ಮತ್ತು ಶ್ರೀ ಕಾಲಭೈರವ ಸ್ವಾಮಿಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿದರು.
ಶ್ರೀ ದ್ವಾರಕಾಮಾಯಿ ಮಂದಿರದ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಆಶೀರ್ವಾದ ಪಡೆದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪಕ್ಷದ ಕಾರ್ಯಕರ್ತರು ಹಾಗೂ ಶ್ರೀ ಕ್ಷೇತ್ರದ ಭಕ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.