ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ತೆವರಮೆಳ್ಳಳ್ಳಿ ಗ್ರಾಮದ ಶಿಮ್ಲಾ ಡಾಬಾ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದವರಾ? ಈ ವರದಿ ಓದಿ…

ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿಗಳನ್ನು ತುಂಬಿದ್ದ ವಾಹನ ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಡೆದ ಈ ಭೀಕರ ಅಪಘಾತದಲ್ಲಿ ೨೦ ಕುರಿಗಳು ಸಾವಿಗೀಡಾಗಿವೆ. ಬೆಳಗಾವಿಯಿಂದ ಕಾಕೋಳ ಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯೆ ಬಂಕಾಪುರ ಟೋಲ್ ಬಳಿ ಈ ದುರಂತ ಸಂಭವಿಸಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಕುರಿ ವ್ಯಾಪಾರಿಗಳಾದ ಮೈಲಾರಪ್ಪ ಕೈದಾಳ (೪೦), ಗುಡ್ಡಪ್ಪ ಕೈದಾಳ (೪೨) ಹಾಗೂ ಚಾಲಕ ಶಿವಕುಮಾರ ಹೊಳೆಪ್ಪನವರ (೨೨) ಮೃತ ದುರ್ದೈವಿಗಳು. ಉಳಿದ ನಾಲ್ವರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಅದರಲ್ಲಿ ಬೀರಪ್ಪ ನಿಂಗರಾಜ್ ಹಿತ್ತಲಮನಿ ನಿಂಗಪ್ಪ ಕೊರಗುಂದ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ದಾವಣಗೆರೆ ಮತ್ತು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.