ಬೆಂಗಳೂರು: ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸುಮಾರು ೧೩.೮೮ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ಸಲ್ಲಿಸಿದ ನಾಮಪತ್ರದಲ್ಲಿ ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕೊಳವೆ ಬಾವಿಗೆ ಬಿದ್ದ ೨ ವರ್ಷದ ಮಗು
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿರುವ ಶೋಭಾ ಅವರ ಬಳಿ ಯಾವುದೇ ಕೃಷಿ ಜಮೀನು ಇಲ್ಲ ಮತ್ತು ಕಾರು ಸಹ ಇಲ್ಲ. ಅವರ ಅಫಿಡವಿಟ್ ಪ್ರಕಾರ ಕೇಂದ್ರ ಸಚಿವೆ ದ್ವಿಚಕ್ರ ವಾಹನ ಮಾತ್ರ ಹೊಂದಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕರಂದ್ಲಾಜೆ ಅವರು ಸುಮಾರು ೯.೨೩ ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು ೬.೭೮ ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ ೪.೦೬ ಕೋಟಿ ರೂಪಾಯಿ ಇದೆ.
ಇದನ್ನೂ ಓದಿ : ಜೆಡಿಎಸ್ – ಬಿಜೆಪಿ ಶತ್ರುಗಳಲ್ಲ : ಆರ್. ವಿ. ದೇಶಪಾಂಡೆ
೫೭ ವರ್ಷದ ಶೋಭಾ ಕರಂದ್ಲಾಜೆ ಅವರ ಬಳಿ ೧ ಕೆಜಿ ಚಿನ್ನದ ಬಿಸ್ಕಟ್(೬೮.೪೦ ಲಕ್ಷ ಮೌಲ್ಯ) ೬೫೦ ಗ್ರಾಂ ಚಿನ್ನದ ಆಭರಣಗಳಿವೆ. ೧೬೨೦ ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳು ಇವೆ. ಅವರ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.